ಲಾಕ್ಡೌನ್ನಲ್ಲಿ ಉಪಯೋಗಿಸಿದ ವಿದ್ಯುತ್ ಬಿಲ್ಲು, ನೀರಿನ ಕರ ಮನ್ನಾಕ್ಕೆ ಆಗ್ರಹ

0
41

ಶಹಾಬಾದ; ಕರೊನಾ ಸೊಂಕು ಹಿನ್ನೇಲೆಯಲ್ಲಿ ಕಳೆದ ಮೂರು ತಿಂಗಳನಿಂದ ರಾಜ್ಯ,ಜಿಲ್ಲೆ ಲಾಕ್ ಡೌನ ಮಾಡಿದ ಹಿನ್ನೇಳೇಯಲ್ಲಿ ವಿದ್ಯುತ್ ಬಿಲ್ಲು, ನೀರಿನ ಕರ ಕಟ್ಟುವದು ಅಸಾಧ್ಯವಾಗಿದ್ದು, ಅದನ್ನು ಮನ್ನಾ ಮಾಡಬೇಕಾಗಿ ರಾಷ್ಟ್ರೀಯ ಭಾವೈಕ್ಯತೆ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಬೆಳಿಗ್ಗೆ ನೂರಾರು ಜನ ಸಣ್ಣ,ಪುಟ್ಟ ವ್ಯಾಪಾರಸ್ಥರು, ತಮ್ಮ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ, ಮಿಲನ್ ಚೌಕದಿಂದ ಮೆರವಣಿಗೆ ಮೂಲಕ ಡಾ.ಅಂಬೇಡ್ಕರ ಪುತ್ಥಳಿ ಮುಂದೆ ಸಮಾವೇಶಗೊಂಡರು.

Contact Your\'s Advertisement; 9902492681

ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪಹಳ್ಳಿ, ಬಸವರಾಜ ಮಯೂರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ ಮರ್ಚಂಟ್ ಮಾತನಾಡಿ, ಲಾಕ್‌ಡೌನ ಹಿನ್ನೇಲೆಯಲ್ಲಿ ಅಂಗಡಿ,ಮುಂಗಟ್ಟುಗಳು, ಸಣ್ಣಪುಟ್ಟ ವ್ಯಾಪಾರಸ್ಥರು, ಗಣಿ ಕಾರ್ಮಿಕರು ಹೆಚ್ಚಿರುವ ನಗರದಲ್ಲಿ ಕೆಲಸವಿಲ್ಲದೆ ಆರ್ಥಿಕವಾಗಿ ತೀವ್ರವಾಗಿ ತತ್ತರಿಸಿದ್ದು, ಮೂರು ತಿಂಗಳ ವಿದ್ಯುತ್ ಬಿಲ್ಲು, ನೀರಿನ ಕರ ಕಟ್ಟುವದು ಅಸಾಧ್ಯವಾಗಿದ್ದರಿಂದ ಸರ್ಕಾರ ಕೂಡಲೇ ವಿದ್ಯುತ್ ಬಿಲ್ಲನ್ನು, ನೀರಿನ ಕರವನ್ನು ಮನ್ನಾ ಮಾಡಬೇಕೆಂದು ಜೆಸ್ಕಾಂ ಇಲಾಖೆ, ನಗರ ಸಭೆಗೆ ಆಗ್ರಹಿಸಿದರು.

ಈ ಕುರಿತು ಜಿಲ್ಲಾ ಜೆಸ್ಕಾಮ ವ್ಯವಸ್ಥಾಪಕ ನಿರ್ಧೇಶಕರಿಗೆ ಬರೆದ ಮನವಿಯನ್ನು ತಹಶೀಲ್ದಾರ ಸುರೇಶ ವರ್ಮಾ ಅವರಿಗೆ ಸಲ್ಲಿಸಿದರು. ನೀರಿನ ಕರ ಕುರಿತು ನಗರ ಸಭೆ ಪೌರಾಯುಕ್ತರಾದ ಕೆ.ಗುರುಲಿಂಗಪ್ಪ ಅವರಿಗೆ ಸಲ್ಲಿಸಿದರು.
ಮುಖಂಡರಾದ ಜಾಫರ ಪಟೇಲ್, ಜಹೀರ ಅಹ್ಮದ ಪಟವೇಗಾರ, ಕಾಶಿನಾಥ ಜೋಗಿ,ಮಹ್ಮದ ಮಸ್ತಾನ, ಅಬ್ದುಲ್ ರಶೀದ್ ಜಮಾದಾರ, ಅಕ್ಬರ್ ಚಿಟ್, ಅಬ್ಬಾಸ್ ಮೂಡಗಿ, ಇಸ್ಮಾಯಿಲ್ ಸಾಹೇಬ್, ಮಹಿಬೂಬ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here