ಶಹಾಬಾದ: ನಗರದ ಬಸವೇಶ್ವರ ನಗರ ಹಾಗೂ ಮಿಲತ್ ನಗರ ಪ್ರದೇಶಗಳಲ್ಲಿ ಎಡಿಬಿ ಯೋಜನೆಯಲ್ಲಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ನಗರದ ಬಸವೇಶ್ವರ ನಗರದಲ್ಲಿ ಆಯೋಜಿಸಲಾದ ಶುದ್ಧ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಶಾಸಕ ಬಸವರಾಜ ಮತ್ತಿಮಡು ಚಾಲನೆ ನೀಡಿ ಮಾತನಾಡಿದರು.
ನಗರದ ವರ್ತುಲ ರಸ್ತೆಯ ಹೊಸ ಬಡಾವಣೆಯಲ್ಲಿ ಸುಮಾರು ೧೪ ಲಕ್ಷ ರೂ. ವೆಚ್ಚದಲ್ಲಿ ೫೦೦ ಮೀಟರ್ ಉದ್ದದ ಪೈಪ್‌ಲೈನ್ ಅಳವಡಿಕೆ ಮಾಡಲಾಗುತ್ತಿದೆ. ರಸ್ತೆಯ ಎರಡು ಬದಿಯ ಹೊಸ ಬಡಾವಣೆಗೆ ನೀರು ಸರಬರಾಜು ಮಾಡಲು ತಲಾ ೬೦೦ ಮೀಟರ ಪೈಪ್‌ಲೈನ್ ಅಳವಡಿಕೆಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಅತ್ಯಂತ ಕಡಿಮೆ ದರದಲ್ಲಿ ಟೆಂಡರ್ ಹಾಕಿದ್ದಾರೆ. ಆದರೆ ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡುವುದಿಲ್ಲ. ಗುಣಮಟ್ಟದ ಕಾಮಗಾರಿ ಮಾಡಲೇಬೇಕೆಂದು ಗುತ್ತಿಗೆದಾರರಿಗೆ ಸ್ಪಷ್ಟಪಡಿಸಿದರು.
ಪೌರಾಯುಕ್ತ ಕೆ.ಗುರುಲಿಂಗಪ್ಪ, ಎಡಿಬಿ ಕಿರಿಯ ಅಭಿಯಂತರು, ನಗರ ಸಭೆ ಎಇಇ ಸರ್ವೋತ್ತಮ, ರವಿ ರಾಠೋಡ, ಅಣವೀರ ಇಂಗಿನಶೆಟ್ಟಿ, ಚಂದ್ರಕಾಂತ ಗೊಬ್ಬುರಕರ್, ಕನಕಪ್ಪ ದಂಡಗುಲಕರ್, ನಾಗರಾಜ ಮೇಲಗಿರಿ, ನಿಂಗಣ್ಣ ಹುಳಗೋಳ, ಪಾರ್ವತಿ ಪವಾರ, ಬಸವರಾಜ ಬಿರಾದಾರ,ವಿಜಯಾನಂದ ಮಾಣಿಕ್,ಸದಾನಂದ ಕುಂಬಾರ, ಸಂಜಯ ಸೂಡಿ,ದತ್ತಾ ಫಂಡ್,ಸಿದ್ರಾಮ ಕುಸಾಳೆ ಇತರರು ಇದ್ದರು.