ಕಲಬುರಗಿಯಲ್ಲಿ ಕೊರೋನಾ ಸೋಂಕಿನಿಂದ 55 ವರ್ಷದ ವ್ಯಕ್ತಿ ನಿಧನ: ಇಂದು ಮತ್ತೆ 42 ಪಾಜಿಟಿವ್

0
56

ಕಲಬುರಗಿ: ಕೊರೋನಾ‌ ಸೋಂಕಿನಿಂದ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೊತ್ತಲಗಾಂವ‌ ಗ್ರಾಮದ 55 ವರ್ಷದ ಪುರುಷ (P-10693) ಮೃತಪಟ್ಡಿದ್ದು,ಶುಕ್ರವಾರ ವೈದ್ಯಕೀಯ ವರದಿಯಿಂದ ದೃಢವಾಗಿದೆ. ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ ‌15ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

ಜ್ವರ, ಉಸಿರಾಟ ತೊಂದರೆ ಹಾಗೂ ಅಸ್ತಮಾ ರೋಗದಿಂದ ಬಳಲುತ್ತಿದ್ದ ಇವರು ಕಳೆದ ಜೂನ್ 23 ರಂದು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ಜೂನ್ 24 ಕ್ಕೆ ನಿಧನ ಹೊಂದಿರುತ್ತಾರೆ. ಇವರು ಬೀದರ ಪ್ರವಾಸ ಹಿನ್ನೆಲೆ ಹೊಂದಿರುತ್ತಾರೆ.

Contact Your\'s Advertisement; 9902492681

ಇವರ ಕೋವಿಡ್-19 ಪರೀಕ್ಷೆಯ ವೈದ್ಯಕೀಯ ವರದಿ ಶುಕ್ರವಾರ ಬಂದಿದ್ದು, ಸೋಂಕು ತಗಲಿರುವುದು ಖಚಿತವಾಗಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

ಜಿಲ್ಲೆಯಲ್ಲಿ ಶುಕ್ರವಾರ 42 ಜನರಿಗೆ ಕೋವಿಡ್-19 ದೃಢ ಪಟ್ಟಿದೆ. ಒಟ್ಟು 75 ಜನ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿತ 1331 ಏರಿಕೆಯಾಗಿದ್ದು, 935 ಬಿಡುಗಡೆ 381 ಸಕ್ರಿಯ ಪೀಡಿತರು ರೋಗಿ ಇದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here