ಕಲಬುರಗಿ: ನಗರದ ಬಹಮನಿ ಈದ್ಗಾ ಮೈದಾನ ಹತ್ತಿರ ಸೈಯದ್ ಏಜಾಜ್ ಅಲಿ ಇನಾಬ್ದಾರ್ ನೇತೃತ್ವದಲ್ಲಿ 250 ನೆರಳು ನೀಡುವ ಸಸ್ಯಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಎಲ್ಲರೂ ಗಿಡಗಳನ್ನು ಬೆಳೆಸಿ ಪೋಷಣೆ ಮಾಡಿ ಪರಿಸರ ಸಂರಕ್ಷಣೆಯಿಂದ ಶುದ್ಧವಾದ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಮಳೆಯ ಕೊರತೆ ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರು ತಮ್ಮ ಮನೆಯ ಮುಂಭಾಗದಲ್ಲಿ ಗಿಡಗಳನ್ನು ಬೆಳಸಬೇಕು ಎಂದು ಇನಾಮ್ದಾರ್ ಕರೆ ನೀಡಿದರು.
ಈ ವೇಳೆಯಲ್ಲಿ ನಯಾ ಸವೇರ ಸಂಘಟನೆಯ ಅಧ್ಯಕ್ಷರಾದ ಮೋದಿನ್ ಪಟೇಲ ಅಣಬಿ ಮಾತನಾಡಿ, ಮರಗಳು ಬೆಳಸಿ ಆಮ್ಲಜನಕ ಪಡೆಯಬಹುದು. ಸಮಾಜದಲ್ಲಿ ಸುಂದರ ವಾತಾವರಣ ನಿರ್ಮಿಸಿ ಆನಂದ ಪಡೆಯಬಹುದೆಂದು ತಿಳಿಸಿದರು.
ಸಲೀಂ ಅಹ್ಮದ್ ಚಿತಾಪುರ್,ಶೇಕ್ ಜಿಲಾನ್ ಪಾಷಾ, ನಿಸಾರ್ ಅಹಮದ್, ಮೆಹಬೂಬ್ ಸಾಬ್, ಸಲೀಂ ಸಗರಿ, ನಯೀಮ್ ಸಾಬ್, ಅಕ್ರಮ್ ಸಾಬ್, ಹಲವರು ಹಾಜರಿದ್ದರು.