ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯ

0
131

ಸುರಪುರ: ರಾಜ್ಯದಲ್ಲಿನ ಆಶಾ ಕಾರ್ಯಕರ್ತೆಯರು ಕೋವಿಡ್-೧೯ ಯುಧ್ಧದಲ್ಲಿ ಜೀವದ ಹಂಗು ತೊರೆದು ಸೇವೆ ಮಾಡುತ್ತಿದ್ದು,ಆಶಾ ಕಾರ್ಯಕರ್ತೆಯರಿಗೆ ಸರಕಾರ ಹೆಚ್ಚಿನ ಕಾಳಜಿ ತೋರಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕೆಂದು ಆಶಾ ಕಾರ್ಯಕರ್ತೆಯರ ತಾಲೂಕು ಸಂಘದ ಅಧ್ಯಕ್ಷೆ ಪುಷ್ಪಲತಾ ಸರಕಾರಕ್ಕೆ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಆಶಾ ಕಾರ್ಯಕರ್ತೆಯರಿಗೆ ಸದ್ಯ ಸರಕಾರ ನೀಡುತ್ತಿರುವ ಗೌರವಧನದಲ್ಲಿ ಜೀವನ ನಡೆಸುವುದು ಕಷ್ಟದ ಸಂಗತಿಯಾಗಿದ್ದು ಕನಿಷ್ಠ ೧೨ ಸಾವಿರ ರೂಪಾಯಿಗಳ ಗೌರವಧನ ನೀಡಬೇಕು ಮತ್ತು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಕೊರೊನಾ ಸೊಂಕು ತಗುಲದಂತೆ ರಕ್ಷಿಸಿಕೊಳ್ಳಲು ಇನ್ನೂ ಹೆಚ್ಚಿನ ರಕ್ಷಾ ಸಲಕರಣೆಗಳನ್ನು ನೀಡಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ಆಶಾ ಕಾರ್ಯಕರ್ತೆಯರ ಆರೋಗ್ಯ ತಪಾಸಣೆಯನ್ನು ಆಗಾಗ ನಡೆಸುವ ಜೊತೆಗೆ ಕೊರೊನಾ ಸೊಂಕು ತಗುಲಿರುವವರಿಗೆ ಉಚಿತ ಚಿಕಿತ್ಸೆ ನೀಡಬೇಕು ಮತ್ತು ಮುಖ್ಯವಾಗಿ ಮಾಸ್ಕ್ ಸ್ಯಾನಿಟೈಜರ್‌ಗಳನ್ನು ಹೆಚ್ಚು ನೀಡಬೇಕೆಂದು ಒತ್ತಾಯಿಸಿ ನಂತರ ಮುಖ್ಯ ಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ್-೧ ತಹಸೀಲ್ದಾರ್ ಸೂಫಿಯಾ ಸುಲ್ತಾನ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರಾದ ಶಾಂತಮ್ಮ ಹಸನಾಪುರ, ಮಲ್ಲಮ್ಮ, ಬಸ್ಸಮ್ಮ, ಗಿರಿಲಿಂಗಮ್ಮ, ಶಾಂತಾ, ಚಂದಮ್ಮ, ಮರೆಮ್ಮ, ಅಂಜಮ್ಮ, ಲಕ್ಷ್ಮೀ, ಶ್ಯಾಮಲಾಬಾಯಿ, ಭೀಮಬಾಯಿ, ಪಾರ್ವತಿ, ಸುಜಾತಾ, ಶಾಂಭವಿ, ಪದ್ಮಾವತಿ, ಮಾನಮ್ಮ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here