Monday, July 15, 2024
ಮನೆಬಿಸಿ ಬಿಸಿ ಸುದ್ದಿರೈತ ವಿರೋಧಿ ಕಾಯ್ದೆಗಳ ಕೈ ಬಿಡಲು ರೈತ ಕಾರ್ಮಿಕರ ಪ್ರತಿಭಟನೆ

ರೈತ ವಿರೋಧಿ ಕಾಯ್ದೆಗಳ ಕೈ ಬಿಡಲು ರೈತ ಕಾರ್ಮಿಕರ ಪ್ರತಿಭಟನೆ

ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಮತ್ತು ಬೈಚಬಾಳ ಗ್ರಾಮ ಪಂಚಾಯತಿಗಳ ಮುಂದೆ ಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶರಣು ಅನಕಸೂಗುರು ಮಾತನಾಡಿ,ಸರಕಾರ ಇಂದು ಭೂ ಸುಧಾರಣೆ ಕಾಯ್ದೆ ಹೆಸರಿನಲ್ಲಿ ಕಾನೂನು ಜಾರಿಗೆ ತರಲು ಮುಂದಾಗಿ ದೇಶದ ರೈತರನ್ನು ಸಮಾಧಿ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಭೂ ಸುಧಾರಣೆ ಕಾಯ್ದೆಯಿಂದ ಸಣ್ಣ ರೈತರು ತಮ್ಮ ಜಮೀನು ಕಳೆದುಕೊಳ್ಳುವ ಹಂತಕ್ಕೆ ಬರಲಿದ್ದಾರೆ.ಇಲ್ಲಿಯವರೆಗೆ ರೈತನಾದವನು ಭೂಮಿ ಖರೀದಿಸುವಂತಿತ್ತು,ಆದರೆ ಈಗ ತರುತ್ತಿರುವ ಕಾನೂನಿನಿಂದ ಯಾರಬೇಕಾದರು ಭೂಮಿ ಖರೀದಿಸಬಹುದಾಗಿದೆ.ಇದರಿಂದ ಭೂಮಿ ಎಲ್ಲವು ಉಳ್ಳವರ ಪಾಲಾಗಲಿದೆ ಎಂದು ಬೇಸರ ತೋಡಿಕೊಂಡರು.

ಅಲ್ಲದೆ ಎಪಿಎಂಸಿ ಕಾಯ್ದೆಯು ರೈತ ವಿರೋಧಿ ಕಾಯ್ದೆಯಾಗಿದೆ.ಜೊತೆಗೆ ಉದ್ಯೋಗ ಖಾತ್ರಿ ಯೊಜನೆ ಹಳ್ಳ ಹಿಡಿದಿದ್ದು ಕಾರ್ಮಿಕರಿಗೆ ಕೆಲಸ ಸಿಗದೆ ವಂಚಿಸಲಾಗುತ್ತಿದೆ.ಕೂಡಲೆ ಸರಕಾರ ಸಮರ್ಪಕವಾಗಿ ಉದ್ಯೋಗ ಖಾತ್ರಿ ಜಾರಿಗೊಳಿಸಬೇಕು ಮತ್ತು ವರ್ಷಕ್ಕೆ ೨೦೦ ದಿನ ಕೆಲಸ ನೀಡಬೇಕು ಮತ್ತು ದಿನಕ್ಕೆ ೬೦೦ ರೂಪಾಯಿಗಳ ಕೂಲಿ ನೀಡಬೇಕೆಂದು ಒತ್ತಾಯಿಸಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಪಂಚಾಯತ್ ಅಧಿಕಾರಿಗಳ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ರಾಜು ಬೋನ್ಹಾಳ ಮುತ್ತಮ್ಮ ಬಸವರಾಜ ನಾಗರಾಜ ರಮಜಾನ್ ಸಾಬ್ ಮತ್ತಿತರರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular