ಸುರಪುರ: ಕೆಪಿಸಿಸಿ ನೂತನ ಸಾರಥಿಯಾಗಿ ನೇಮಕಗೊಂಡಿರುವ ಡಿ.ಕೆ.ಶಿವಕುಮಾರ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗು ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳೆ ಮತ್ತು ನಿಸಾರ್ ಅಹ್ಮದ್ ಅವರು ಅಧಿಕಾರ ಸ್ವೀಕರಿಸಿದ್ದರಿಂದ ಕಾಂಗ್ರೇಸ್ ಪಕ್ಷ ಮತ್ತಷ್ಟು ಬಲವರ್ಧನೆಗೆ ಶಕ್ತಿ ತುಂಬಿದೆ ಎಂದು ಪಕ್ಷದ ಹಿರಿಯ ಮುಖಂಡ ನಾಗಣ್ಣ ಸಾಹುಕಾರ ದಂಡಿನ್ ಹೇಳಿದರು.
ಹುಣಸಗಿ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೇಸ್ ಸಮಿತಿ ವತಿಯಿಂದ ಹಮ್ಮಿಕೊಂಡ ಅಧ್ಯಕ್ಷರು ಹಾಗೂ ಕಾರ್ಯಧ್ಯಕ್ಷರ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಭಾವಿ ಮುಖಂಡ ಡಿ.ಕೆ.ಶಿವಕುಮಾರ ಅವರು ರಾಜಕೀಯ ಚತುರರು, ಪಕ್ಷ ಸಂಘಟನೆಗೆ ಎಲ್ಲರ ವಿಶ್ವಾಸ ತೆಗೆದುಕೊಂಡು ಹೋಗುವ ಮನೋಭಾವ ಅವರಲ್ಲಿದೆ ಮತ್ತು ಪಕ್ಷ ಬೆಳವಣಿಗೆಗೆ ಕಾರ್ಯಕರ್ತರ ಶ್ರಮವೂ ಅಗತ್ಯವಿದೆ ಎಂದು ತಿಳಿಸಿದರು.
ಜಿ.ಪಂ.ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಮಾತನಾಡಿ, ಡಿಕೆಶಿ ಸರಳ ಸಜ್ಜನಿಕ ರಾಜಕಾರಣಿ. ಹೀಗಾಗಿ ಅವರ ವ್ಯಕ್ತಿತ್ವ, ವಾಕ್ ಚಾತುರ್ಯ ಪರಿಗಣಿಸಿದ ಹೈಕಮಾಂಡ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದೆ. ಹಿರಿಯ ಮೂವರಿಗೆ ಕಾರ್ಯಾಧ್ಯಕ್ಷರನ್ನಾಗಿಸಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೇಸ್ ಪಕ್ಷ ಬಲಾಡ್ಯವಾಗಿ ಹೊರ ಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮುಖಂಡ ಬಾಪುಗೌಡ ಪಾಟೀಲ ಪ್ರಸ್ತಾವಿಕ ಮಾತನಾಡಿ, ನಂತರ ಕೆಪಿಸಿಸಿ ಅಧ್ಯಕ್ಷ ಅಧಿಕಾರ ಸ್ವೀಕಾರ ಹಾಗೂ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ನೇರಲೈವ್ ಕಾರ್ಯಕ್ರಮವನ್ನು ಕಾರ್ಯಕರ್ತರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಗುರುಪ್ಪ ಸಜ್ಜನ್, ಚೆನ್ನಯ್ಯಸ್ವಾಮಿ ಹಿರೇಮಠ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮುದಿಗೌಡ(ಗೌಡಪ್ಪಗೌಡ) ಕುಪ್ಪಿ, ಪ.ಪಂ.ಸದಸ್ಯ ನಾಗಯ್ಯಸ್ವಾಮಿ.ಎಸ್.ದೇಸಾಯಿ, ಪಕ್ಷದ ಸಂಯೋಜಕ ಮಿರಜ್ ಕಲ್ಯಾಣವಾಲ, ಉಮರ್, ಖಾಜಾ ಪಟೇಲ್, ಸುಲ್ತಾನ್ ಪಟೇಲ್, ರವಿ ಮಲಗಲದಿನ್ನಿ, ಬಸಯ್ಯಸ್ವಾಮಿ, ಭೀಮಣ್ಣ ನಾಟೇಕರ್, ತಿರುಪತಿ ರಾಠೋಡ, ನಿಂಗಣ್ಣ ಕೋಳೂರು ಹಾಗೂ ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳು ಇದ್ದರು. ಮಡಿವಾಳಪ್ಪ ಮಿಲಟ್ರಿ ಸ್ವಾಗತಿಸಿದರು. ಬಸವರಾಜ ಸಜ್ಜನ್ ವಂದಿಸಿದರು.