ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ಮಾಸಿಕ ಗೌರವಧನಕ್ಕೆ ಆಗ್ರಹ

0
33

ಶಹಾಬಾದ: ಆಶಾ ಕಾರ್ಯಕರ್ತೆಯರಿಗೆ ೧೨೦೦೦ರೂ. ಮಾಸಿಕ ಗೌರವಧನ ಖಾತರಿಪಡಿಸಬೇಕು ಮತ್ತು ಅಗತ್ಯವಿರುವಷ್ಟು ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ಒದಗಿಸಬೇಕೆಂದು

ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎ.ಐ.ಯು.ಟಿ.ಯು.ಸಿ) ವತಿಯಿಂದ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Contact Your\'s Advertisement; 9902492681

ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ರೋಗಾಣುಗಳ ಹರಡುವಿಕೆಯನ್ನು ತಡೆಗಟ್ಟಲು ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಾದ್ಯಂತ ಕಳೆದ ೨ ತಿಂಗಳಿಂದ ಅವಿರತ ಸೇವೆಯಲ್ಲಿರುವ ’ಫ್ರಂಟ್ ಲೈನ್ ವಾರಿಯರ‍್ಸ್’ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಗಳು ದಿನದಿಂದ ದಿನ ಹೆಚ್ಚಾಗುತ್ತಿರುವುದು ಆಶಾ ಸಮುದಾಯಕ್ಕೆ ತುಂಬಾ ಭಯ-ಆತಂಕವನ್ನು ಉಂಟು ಮಾಡಿದೆ.

ಈ ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ, ಆದಾಯಗಳಿಲ್ಲದೆ ಒತ್ತಡ, ಹತಾಶೆಗೆ ಒಳಗಾಗಿದ್ದಾರೆ. ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುವಾಗ ಹಲ್ಲೆಗೆ ಒಳಗಾಗುತ್ತಿದ್ದಾರೆ. ಕೂಡಲೇ ಪ್ರೋತ್ಸಾಹ ಧನ ಮತ್ತು ಗೌರವಧನ ಸೇರಿಸಿ ಮಾಸಿಕ ೧೨೦೦೦ ರೂ. ನೀಡಬೇಕು. ಮೇಲಿಂದ ಮೇಲೆ ಆಶಾ ಕಾರ್ಯಕರ್ತೆಯರ ಆರೋಗ್ಯ ತಪಾಸಣೆ ಮಾಡಬೇಕು.ಪಾಸಿಟಿವ್ ಬಂದಿರುವ ಕಾರ್ಯಕರ್ತೆಯರಿಗೆ ಉಚಿತ ಚಿಕಿತ್ಸೆ ನೀಡಬೇಕು. ಈ ಅವಧಿಯಲ್ಲಿ ಸಂಪೂರ್ಣ ಗೌರವ ಧನ ನೀಡಬೇಕು. ಅಗತ್ಯವಿರುವಷ್ಟು ಮಾಸ್ಕ್ ಹಾಗೂ ಸ್ಯಾನಿಟೈಸರ್, ಗ್ಲೌಸ್‌ಗಳನ್ನು ನೀಡಬೇಕು.ಕೋವಿಡ್-೧೯ಯಿಂದಾಗಿ ಸಾವಿಗೀಡಾದ ಆಶಾ ಕುಟುಂಬಕ್ಕೆ ನೀಡುವ ರೂ.೫೦ ಲಕ್ಷ ವಿಮೆಸೌಲಭ್ಯವನ್ನು ನೀಡಬೇಕೆಂದು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಜ್ಯೋತಿ ನಾಗೇಂದ್ರ ಸಾಗರ, ತಾಲೂಕಾ ಸಂಚಾಲಕ ರಾಘವೇಂದ್ರ.ಎಮ್.ಜಿ, ನಗರ ಅಧ್ಯಕ್ಷರಾದ ಜೋತಿ ನಾಗೇಂದ್ರ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here