ಕಲಬುರಗಿ: ದೇಶಕ್ಕೆ ರೈತರು ಬೇನೆ ಎಲುಬು, ರಾಜಕೀಯ ಪಕ್ಷಕ್ಕು ಕೃಷಿಕರು ಬೇನೆ ಎಲುಬು ಎಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಮಪ್ರಭು ಪಾಟೀಲ ನೆಲೋಗಿ ಹೇಳಿದರು. ಇಂದು ಅತ್ಯಂತ ಸರಳ ಸಮಾರಂಭದಲ್ಲಿ ಮಾತನಾಡಿದರು.
ಗೆಳಯರ ಬಳಗದಿಂದ ವಿಶಾಲ ಬಯಲು ಪ್ರದೇಶದಲ್ಲಿ ಕಾರ್ಯಕ್ರಮ ನಡೆಯಿತು. ನೂತನ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ವೀರಣ್ಣಗೌಡ ಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ರೈತರು, ಕೃಷಿಕರು ಇದ್ದರೆ ದೇಶ, ನಾಡು ರಕ್ಷಣೆ ಮಾಡುವರು. ಅನ್ನ, ಆಹಾರ ನೀಡುವನ್ನು ರೈತ ಮಾತ್ರ, ರೈತರಿಂದ ರಾಜಕೀಯ ಪಕ್ಷಗಳು ಉಳಿಯುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಮುಖಂಡರಾದ ದೇವಿಂದ್ರಪ್ಪ ಮರತೂರ, ಶಿವಶರಣಪ್ಪ ಕೋಬಾಳ, ತುಕರಾಮ ಪಾಟೀಲ, ಮಲ್ಲಿಕಾರ್ಜುನ ಆಲೂರ ಸಾಹುಕಾರ, ಶರಣಪ್ಪ ಅಂದಾನಿ, ಹಣಮಂತರಾಯಗೌಡ ಉದನೂರ, ಮಲ್ಲಿಕಾರ್ಜುನ ಅಜಗೊಂಡ, ಬಸವರಾಜ ಮರತೂರ, ಮಹಾಂತೇಶ ಪಾಟೀಲ, ಪ್ರಭುಲಿಂಗ ಬಾಳಿ, ಗಜೇಂದ್ರ ಗುತ್ತೇದಾರ, ಶಾಂತಪ್ಪ ನಿಂಬಾಳ, ಸಂಗನಗೌಡ ಪಾಟೀಲ, ಜಯಶೆಟ್ಟಿ, ಶಿವಕುಮಾರ ಬಿದರಿ, ಲಕ್ಷ್ಮಪುತ್ರ ಜಮಾದಾರ, ಖಾಜಾ ಪಟೇಲ್, ನಿಂಗಪ್ಪ ಪೂಜಾರಿ, ಸತೀಶ ಸಾಹು, ದೇವಿಂದ್ರ ನಂದಿಕೂರ, ಚಂದ್ರಪ್ಪ ಮಾಸ್ಟರ್, ದೇವಿಂದ್ರಪ್ಪ ಜಮಾದಾರ ಇತರರು ಉಪಸ್ಥಿತರಿದ್ದರು.