ಕಲಬುರಗಿ: ಕೋವಿಡ್-19 ಮುನ್ನೆಚ್ಚರಿಕೆ ಕ್ರಮ ಮತ್ತು ರೋಗಿಗಳಿ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅರೋಗ್ಯ ಮತ್ತು ಕುಟುಂಬ ಇಲಾಖೆ ಔಷಧಿ ಪಡೆಯುವ ಗ್ರಾಹಕರ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಮಾಹಿತಿ ಕಡ್ಡಾಯವಾಗಿ ಪಡೆಯಲು ಸೂಚಿಸಿತ್ತು. ಈ ನಿಯಮ ಪಾಲಿಸದ ರಾಜ್ಯದ ಒಟ್ಟು 110 ಔಷಧಿ ಅಂಗಡಿಗಳ ಪರವಾನಗಿ ರದ್ದು ಮಾಡಿ ಬಿಸಿ ಮುಟ್ಟಿಸಿದೆ.
ಜ್ವರ, ನೆಗಡಿ, ಕೆಮ್ಮು ಮುಂತಾದ ರೋಗಿಗಳಿಗೆ ಮಾತ್ರೆಗಳನ್ನು ಖರೀದಿಸುವ ಗ್ರಾಹರ ಮಾಹಿತಿ ಇಲಾಖೆ ಕೇಳಿತ್ತು. ಸೂಕ್ತವಾಗಿ ಮಾಹಿತಿ ಪಡೆಯದೆ ಆದೇಶ ಉಲ್ಲಂಘಿಸಿದ ಔಷಧಿ ಅಂಗಡಿಗಳ ಪರವಾನಗಿ ರದ್ದು ಮಾಡಿರುವುದಾಗ ಅಪಾರ ಔಷಧ ನಿಯಂತ್ರಕರಾದ ಅಮರೇಶ ತುಂಬಗಿ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಲಬುರಗಿ 70 ಔಷಧಿ ವಿತರ ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದ್ದು, ಬಿಜಾಪುರದಲ್ಲಿ 15 ಅಂಗಡಿಗಳ ಪರವಾನಗಿ ಕಳೆದು ಕೊಂಡ ಎರಡನೇ ಜಿಲ್ಲೆಯಾಗಿದೆ. ಬೀದರ್, ಮೈಸೂರು ತಲಾ ನಾಲ್ಕು, ಬೆಂಗಳೂರು 3, ರಾಯಚೂರು 9, ಬಾಗಲಕೋಟ 5 ಅಂಗಡಿಗಳ ಪರವಾನಗಿ ರದ್ದಾಗಿವೆ ಎಂದು ಔಷಧಿ ನಿಯಂತ್ರಣ ಇಲಾಖೆ ಜಿಲ್ಲಾವಾರು ಅಂಕಿಅಂಶಗಳನ್ನು
ಬಿಡುಗಡೆ ಮಾಡಿದೆ.