ಕಲಬುರಗಿ: ಕೊರೋನಾ ವೈರಸ್ ನ ಅತಿಯಾದ ಹರಡುವಿಕೆ ಮತ್ತು ಲಾಕ್ ಡೌನ್ ನಿಂದಾಗಿ ನಮ್ಮ ವಿಶ್ವ,ದೇಶ ಸೇರಿ ಕರ್ನಾಟಕ ರಾಜ್ಯವು ಸಂಕಷ್ಟಕ್ಕೆ ಸಿಲುಕಿದೆ ರಾಜ್ಯದ ಜನತೆ ಹೊಟ್ಟೆ,ಬಟ್ಟೆ, ಆಶ್ರಯ ಮತ್ತು ಉದ್ಯೋಗಕ್ಕಾಗಿ ಪರದಾಡುತ್ತಾ ಆದಾಯ ಇಲ್ಲದೆ ಅತಿಯಾದ ಸಂಕಷ್ಟಕ್ಕೆ ಸಲುಕಿ ಸಾವು ಬದುಕಿನ ಮಧ್ಯೆ ಇದ್ದಾರೆ.ರಾಜ್ಯದ ವಿದ್ಯಾರ್ಥಿ ಸಮುದಾಯವು ಇದಕ್ಕೆ ಹೊರತಾಗಿಲ್ಲ ಆದರೆ ಆಳುವ ಸರ್ಕಾರ ಮಾತ್ರ ವಿದ್ಯಾರ್ಥಿ ಸಮಸ್ಯೆಗಳು ಸೇರಿ ಅವರ ಭವಿಷ್ಯದ ಶೈಕ್ಷಣಿಕ ಬದುಕಿನ ಬಗ್ಗೆ ಗಮನ ಹರಿಸುತ್ತಿಲ್ಲ, ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿ ಆಗ್ರಹಿಸಿದೆ.
ಈ ವೇಳೆಯಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮೈಲಾರಿ ದೊಡ್ಡಮನಿ ಮಾತನಾಡಿ ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿಯನ್ನು ಕೈ ಬಿಟ್ಟು ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗ ಆಗ್ರಹಿಸಿದರು.
ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ಸಿದ್ದಲಿಂಗ ಪಾಳಾ ತಾಲ್ಲೂಕು ಅಧ್ಯಕ್ಷರಾದ ವಿಶ್ವನಾಥ ರಾಗಿ, ಶಾಂತಕುಮಾರ ಗುಡುಬ, ಸಿದ್ದಪ್ಪ ಶಕಪುರ್, ಭಾಷಾ ಪಟೇಲ್ ಸೇರಿದಂತೆ ಈ ಸಂದರ್ಭದಲ್ಲಿ ಇದ್ದರು.
ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳು
- ಪರೀಕ್ಷೆಗಳನ್ನು ರದ್ದುಪಡಿಸಲು ಎಸ್ ಎಫ್ ಐ ಸಂಘಟನೆ ಆಗ್ರಹ.
- ಸರ್ಕಾರ ಆರು ತಿಂಗಳ ಎಲ್ಲಾ ಶೈಕ್ಷಣಿಕ ಶುಲ್ಕಗಳನ್ನು ತೆಗೆದು ಕೊಳ್ಳಬಾರದು ಮಾಡಬೇಕು.
- ಮಕ್ಕಳು ಹಸಿವಿನಿಂದ ಮುಕ್ತವಾಗಬೆಕೆಂದರೆ,
- ಲಾಕ್ ಡೌನ್ ಸಮಯದಲ್ಲಿ 6 ತಿಂಗಳ ಕಾಲ ಪ್ರತಿ ತಿಂಗಳು ಬಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸರ್ಕಾರ ರೂ .7500 / – ನೀಡಬೇಕು.
- ಆನ್ ಲೈನ್ ಶಿಕ್ಷಣ ಕಡ್ಡಾಯ ಬೇಡ; ಡಿಜಿಟಲ್ ಡಿವೈಡ್ ತಡೆಯಬೇಕು.
- ಫೆಲೋಶಿಪ್ ಶೀಘ್ರವಾಗಿ ವಿತರಿಸಿ.
- ಬಾಕಿ ಸಂಬಳ/ಪರಿಹಾರ ಧನ ನೀಡಬೇಕು
- ಪದವಿ ಕಾಲೇಜುಗಳ ಸ್ಥಳಾಂತರ ನಿಲ್ಲಬೇಕು.
- ದೇಶಾದ್ಯಂತ ಯುವತಿಯರ ಮೇಲಿನ ಅತ್ಯಾಚಾರ ಮತ್ತು ಕೊಲೆಗಳ ಏರಿಕೆ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು.
- ಕೋವಿಡ್-19 ಪರೀಕ್ಷೆಗಳನ್ನು ಉಚಿತವಾಗಿ ಮಾಡಬೇಕು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗೆ ದರ ನಿಗದಿ ಮಾಡಿರುವುದನ್ನು ಖಂಡಿಸಿ.
- ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರೋದಿಸಿ ಮತ್ತು ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಗಳನ್ನು ಜಿಎಸ್ಟಿ ಪರಿಧಿಯೊಳಗೆ ತರಲು ಒತ್ತಾಯಿಸಿ.
- ಉದ್ಯೋಗ ಸೃಷ್ಟಿಸಲು, ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಒತ್ತಾಯಿಸಿ
- ಹೊಸ ಶಿಕ್ಷಣನೀತಿ-2019 ಜಾರಿಯಿಂದಾಗುವ ಶಿಕ್ಷಣದ ಖಾಸಗೀಕರಣ ಮತ್ತು ಕೇಸರೀಕರಣದ ಅಪಾಯಕಾರಿ ನೀತಿಗಳನ್ನು ವಿರೋಧಿಸಿ.
ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಈಡೇರಿಕೆಗೆ ಮುಂದಾಗಬೇಕೆಂದು SFI ಇಂದು ರಾಜ್ಯವ್ಯಾಪಿ ಹೋರಾಟದ ಮೂಲಕ ಒತ್ತಾಯಿಸುತ್ತದೆ.