ಜನುಮ ದಿನದಂದು ಪರಿಸರ ಪ್ರೇಮ ಮೆರೆದ ನಿಂಗಣ್ಣ ಜಡಿ ಸೇವೆ ಅನನ್ಯ: ಮಲ್ಲಿಕಾರ್ಜುನ ಸತ್ಯಂಪೇಟೆ

0
38

ಸುರಪುರ: ಇಂದು ಅನೇಕರು ತಮ್ಮ ಜನುಮ ದಿನದ ಹೆಸರಲ್ಲಿ ಮೋಜು ಮಸ್ತಿಗೆ ಒತ್ತು ನೀಡಿ ಕುಡಿದು ಕುಣಿದು ಕುಪ್ಪಳಿಸಿ ಸಂತೋಷ ಪಡುವವರೆ ಹೆಚ್ಚು.ಆದರೆ ಇವರೆಲ್ಲರಿಗೂ ಮಾದರಿ ಎಂಬಂತೆ ತಮ್ಮ ಜನುಮ ದಿನದಂದು ಪರಿಸರ ಪ್ರೇಮ ಮೆರೆದ ನಿಂಗಣ್ಣ ಜಡಿ ಸೇವಗೆ ಅನನ್ಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿದರು.

ನಗರದ ಪ್ರಿಯದರ್ಶಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನವಚೇತನ ಟ್ರಸ್ಟ್ ಅಧ್ಯಕ್ಷ ನಿಂಗಣ್ಣ ಜಡಿ ತಮ್ಮ ೩೨ನೇ ಹುಟ್ಟು ಹಬ್ಬದ ಅಂಗವಾಗಿ ೩೨ ಸಸಿಗಳನ್ನು ನೆಟ್ಟು ಆಚರಿಸಿಕೊಂಡ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ,ಜಡಿಯವರಂತ ಚಿಂತನೆ ಪರಿಸರದ ಕುರಿತು ಕಾಳಜಿ ಇಂದಿನ ಯುವಕರಲ್ಲಿ ಬರುವುದು ಅವಶ್ಯಕವಾಗಿದೆ.ಇಂದು ಶುದ್ಧ ನೀರು ಮತ್ತು ಗಾಳಿಗಾಗಿ ಜನರು ಹಣ ನೀಡಬೇಕಾದ ಪರಸ್ಥಿತಿಯನ್ನು ತಂದುಕೊಂಡಿದ್ದೆವೆ,ಇದಕ್ಕೆ ಪರಿಸರ ಹಾನಿಯೆ ಕಾರಣವಾಗಿದೆ.ಆದ್ದರಿಂದ ಎಲ್ಲರೂ ಪರಿಸರ ಬೆಳೆಸಲು ಮುಂದಾಗುವಂತೆ ಕರೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಿಂಗಣ್ಣ ಜಡಿ ಮಾತನಾಡಿ,೩೨ ಸಸಿಗಳನ್ನು ನೆಡುವ ಜೊತೆಗೆ ಈ ಎಲ್ಲಾ ಸಸಿಗಳನ್ನು ನಿರಂತರವಾಗಿ ಜೋಪಾನ ಮಾಡುವ ಜವಬ್ದಾರಿ ನನ್ನ ಮೇಲಿದೆ.ಅದಕ್ಕಾಗಿ ನಾನು ಸದಾಕಾಲ ಈ ದಿನದ ಸವಿನೆನಪಲ್ಲಿ ಸಸಿಗಳನ್ನು ಬೆಳೆಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಮಾನಪ್ಪ ಕರಡಕಲ್,ಶಾಲೆಯ ಮುಖ್ಯಗುರು ಮಲ್ಲಿಕಾರ್ಜುನ ನಾಂದೇಲಿ,ಸಗರ ನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ,ಮಲ್ಲು ದಂಡಿನ್,ಫಕೀರ್ ಅಹ್ಮದ್ ಮರಡಿ,ಸಾಹೇಬ್ ರೆಡ್ಡಿ ಇಟಗಿ,ಮೋತಿಲಾಲ್ ಚವ್ಹಾಣ್,ಸಾಹೇಬ್‌ಗೌಡ ದಿವಳಗುಡ್ಡ,ಅಶೋಕ ರಾಠೋಡ್,ನಾಗಮ್ಮ ಕಲ್ಮಠ್,ಪ್ರಕಾಶ ಬಾವೂರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here