ಮುಸ್ಲಿಂ ಸಮುದಾಯದ ಮದುವೆಗೆ ಖಾಜಿ ಕಚೇರಿಯಲ್ಲಿ ಅವಕಾಶಕ್ಕೆ ಆಗ್ರಹ

0
148

ಕಲಬುರಗಿ: ರಾಜ್ಯ ಸರಕಾರ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಮತ್ತು ಕಲ್ಯಾಣಮಂಟಪದಲ್ಲಿ ದೇವಸ್ಥಾನದಲ್ಲಿ ಮದುವೆಗೆ ನಿಷೇಧಾಜ್ಞೆ ಜಾರಿ ಮಾಡಿ, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮಾತ್ರ ಅನುಮತಿ ನೀಡಿದ್ದು, ಮುಸ್ಲಿಂ ಸಮುದಾಯದಲ್ಲಿ ಶರಿಯತ್ ಪ್ರಕಾರ ಮದುವೆ ಮಾಡಿಕೊಳ್ಳಲು ಅನುಮತಿ ಇದ್ದು, ಸಮುದಾಯಕ್ಕೆ ರಾಜ್ಯ ಸರಕಾರದ ನಿಯಮದಂತ ಖಾಜೆ ಕೇಂದ್ರದಲ್ಲಿ ಮದುವೆ ಅವಕಾಶ ಕಲ್ಪಿಸಬೇಕೆಂದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಮಪ್ರಭು ಪಾಟೀಲ್ ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಯಾ ಸವೇರಾ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮತನಾಡಿದ ಅವರು, ರಾಜ್ಯ ಸರಕಾರ ಜಿಲ್ಲೆಯಲ್ಲಿ ಖಾಸಗಿ ಪ್ರದೇಶದಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಗಳಿಗೆ ನಿಷೇಧ ಜಾರಿ ಮಾಡಿವುದು ಒಳ್ಳೆಯ ವಿಚಾರವಾಗಿದೆ ಸರಕಾರದ ಈ ಪ್ರಯತ್ನ ಕೊರೊನಾ ತಡೆಗೆ ಸಹಕಾರಿಯಾಗಲಿದೆ ಎಂದು ಈ ಸಂದರ್ಭದಲ್ಲಿ ಹರ್ಷವ್ಯಕ್ತಪಡಿಸಿದರು.

Contact Your\'s Advertisement; 9902492681

ಆದರೆ ಮುಸ್ಲಿಂ ಜನಾಂಗ ಈ ರೀತಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ, ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಶರಿಯತಗೆ ವಿರುದ್ಧವಾಗಿದೆ ಇಸ್ಲಾಂನಲ್ಲಿ ಪ್ರಕಾರ ನಿಕಾಹ ಆಗಬೇಕಾಗಿದ್ದು, ಅದಕ್ಕಾಗಿ ಖಾಜಿ ಕಚೇರಿಯಲ್ಲಿ ಮದುವೆ ಮಾಡುವುದಕ್ಕೆ ಅನುಮತಿ ನೀಡಬೇಕೆಂದು ಮುಸ್ಲಿಂ ಸಮುದಾಯದ ಪರವಾಗಿ ಒತ್ತಾಯಿಸಿದರು.

ಜಿಲ್ಲಾ ಖಾಜಿ ಕೇಂದ್ರ ಬೆಳಿಗ್ಗೆ  8 ರಿಂದ 10 ಜನರ ಉಪಸ್ಥಿತಿಯಲ್ಲಿ ನಿಕಾಹಕ್ಕೆ ಅನುಮತಿ ನೀಡಬೇಕು, ಶರಿಯತ್ ಪ್ರಕಾರ ನಿಕಾಹಕ್ಕೆ ಅನುಮತಿ ನೀಡದಿದಲ್ಲಿ ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಬ್ಲಾಕ್ ಕಾಂಗ್ರೆಸ್ ದಕ್ಷಿಣ ಸಮಿತಿ ಅಧ್ಯಕ್ಷರಾದ ನೀಲಕಂಠ ಮೂಲಗೆ ಮತ್ತು ಸಂಘಟನೆ ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ ಅವರ ನೇತೃತ್ವದಲ್ಲಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ರಾಜ್ಯ ಯುವ ಕಾಂಗ್ರೆಸ್ ವಕ್ತಾರರಾದ ಚೇತನ ಪಾಟೀಲ್ ಗೋ ನಾಯಕ್, ಹಾಮಿದ್ ಫೈಸಲ್ ಸಿದ್ದಿಕಿ ಹೆಡ್ ಖಾಜಿ, ಸಲೀಂ ಅಹ್ಮದ್ ಚಿತಾಪುರ್, ಸೈಯದ್ ಏಜಾಜ್ ಅಲಿ ಇನಾಮ್ದಾರ್, ಸಜಿದ್ ಅಲಿ ರಂಜೋಳವಿ, ರೀಜ್ವಾನ್ ಉರ್ ರೆಹಮಾನ್ ಸಿದ್ದಿಕಿ, ಹೈದರ್ ಅಲಿ ಇನಾಮ್ದಾರ್, ಸಾಯಿರಾಬಾನು, ರಾಬಿಯಾ ಶಿಕಾರಿ, ಸಲೀಂ ಸಗರಿ, ಮೊಹಮ್ಮದ್ ರುಕ್ನುದ್ದಿನ್ ಮುಲ್ಲಾ, ರಿಯಾಜ್ ಪಟೇಲ್ ಬಿಳವಾರ್, ಮುಬೀನ್ ಅನ್ಸಾರಿ, ಹಾಫಿಜ್ ಶೇಕ್, ಅಬ್ಬಾಸ ಅಲಿ, ಹಾಫೀಸ್ ವಾಜಿದ್ ಉರ್ ರಹಿಮಾನ್, ಸೈಯದ್ ಅವು ಲಿಯ ಹುಸೇನಿ, ಆಯಿಷಾ ಶಿಕಾರಿ, ಫಾತಿಮಾ ಶಿಕಾರಿ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here