ಕಲಬುರಗಿ; ಜಿಲ್ಲೆಯಲ್ಲಿ ಕೊರೊನಾ ವೈರಸ್ ಶಾಸಕರ ವಲಯಕ್ಕೆ ಕಾಲಿಟ್ಟಿದ್ದು, ಇಂದು ಮತ್ತೋರ್ವ ಶಾಸಕರಿಗೆ ವೈರಸ್ ತಗಲಿರುವ ಬಗ್ಗೆ ದೃಢ ಪಟ್ಟಿದೆ.
ಜೇವರ್ಗಿ ಕ್ಷೇತ್ರದ ಹಾಲಿ ಶಾಸಕ ಮಾಜಿ ಸಿಎಂ ಎನ್ ಧರ್ಮಸಿಂಗ್ ಅವರ ಪುತ್ರರಾದ ಡಾ. ಅಜಯ ಸಿಂಗ್ ಅವರಿಗೆ ಕೊರೊನಾ ಪಾಜಿಟಿವ್ ಆಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ನಿನ್ನೆಯಷ್ಟೆ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಅವರಿಗೆ ಕೊರೊನಾ ಪಾಜಿಟಿವ್ ಆಗಿರುವ ಬಗ್ಗೆ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಶಾಸಕ ಅಜಯಸಿಂಗ್ ತನ್ನ ಸಂಪರ್ಕಕ್ಕೆ ಬಂದಿರುವ ಬೆಂಬಲಿಗರು ಹಾಗೂ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕೆ ವಹಿಸಿ ಎಂದು ಮನವಿ ಮಾಡಿದ್ದಾರೆ.