ಶಹಾಪುರ : ಇಂದು ಸಾಯಂಕಾಲ ಸುರಿದ ಭಾರಿ ಮಳೆಗೆ ಶಹಾಪುರ ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿರುವ ಬಸವೇಶ್ವರ ವೃತ್ತ ಸಂಪೂರ್ಣ ಜಲಾವೃತಗೊಂಡಿದೆ.
ಪ್ರತಿ ಬಾರಿಯೂ ಮಳೆ ಬಂದಾಗ ಬಸವೇಶ್ವರ ಸರ್ಕಲ್ನಲ್ಲಿ ಜಲಾವೃತಗೊಂಡಿರುವುದು ನಗರಸಭೆ ಕಂಡು ಕಾಣದಂತೆ ವರ್ತಿಸುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಆಡದವರು ಆರೋಪಿಸಿದ್ದಾರೆ.
ಬಸವೇಶ್ವರ ಸರ್ಕಲ್ ನಲ್ಲಿ ಮಳೆ ಬಂದಾಗ ತುಂಬಾ ನೀರು ಜಮಾಯಿಸಿ ಕೊಂಡು ಪ್ರಯಾಣಿಕರಿಗೆ ಪಾದಚಾರಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.ಕಾರಣ ಸ್ಥಳೀಯ ಪ್ರಭಾವಿ ವ್ಯಕ್ತಿಗಳು ಬಸವೇಶ್ವರ ಸರ್ಕಲ್ ಸುತ್ತಮುತ್ತಲೂ ಚರಂಡಿಯ ಮೇಲೆ ಕಾನೂನು ಬಾಹಿರವಾಗಿ ಹಾಗೂ ಅನಧಿಕೃತವಾಗಿ ಅಂಗಡಿಗಳು ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಈ ರೀತಿ ಮೇಲಿಂದ ಮೇಲೆ ತೊಂದರೆಯಾಗುತ್ತಿದೆ.
ನಗರಸಭೆ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುವುದನ್ನು ಬಿಟ್ಟು ಇಂಥ ಅಂಗಡಿಗಳನ್ನು ತೆರವುಗೊಳಿಸಿ ಮಳೆ ನೀರು ಹಾಗೂ ಕಲುಷಿತ ನೀರು ಹರಿಯುವುದಕ್ಕೆ ಚರಂಡಿ ಸ್ವಚ್ಛಗೊಳಿಸಿ ಸೂಕ್ತ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.