ಡಾ.ಮಲ್ಲಿಕಾರ್ಜುನ ಖರ್ಗೆ ಅವರ 78ನೇ ಜನ್ಮದಿನದ ನಿಮಿತ್ತ ಮಾಸ್ಕ್ ವಿತರಣೆ

0
67

ಕಲಬುರಗಿ: ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನ ನೇತೃತ್ವದ ಸಾಂಸ್ಕೃತಿಕ ಬಳಗವು ನಗರದ ಸಾರ್ವಜನಿಕರಿಗೆ ಸುಮಾರು ೫೦೦ ಕ್ಕೂ ಹೆಚ್ಚು ಗುಣಮಟ್ಟದ ಮಾಸ್ಕ್‌ಗಳನ್ನು ವಿತರಿಸಿ ಮಹಾಮಾರಿ ಕೊರೊನಾ ಸೋಂಕಿನ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಮೂಲಕ ಮಾಜಿ ಕೇಂದ್ರ ಸಚಿವರೂ ಆದ ಹಾಲಿ ರಾಜ್ಯಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆಜೀ ಅವರ ೭೮ನೇ ಜನ್ಮದಿನವನ್ನು ಮಾನವೀಯತೆ ನೆಲೆಯಲ್ಲಿ ಆಚರಿಸಿ ಜನರ ವಿಶೇಷ ಗಮನ ಸೆಳೆಯಿತು.

ಕಳೆದ ಐದು ದಶಕಗಳಿಂದ ರಾಜ್ಯಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆಜೀ ಅವರು ಈ ಭಾಗಕ್ಕೆ ಕೊಟ್ಟ ಅಮೋಘ ಕೊಡುಗೆಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ ನೆಲೋಗಿ, ಉದ್ಯಮಿ ರಾಜಗೋಪಾಲರೆಡ್ಡಿ, ಖ್ಯಾತ ವೈದ್ಯ ಡಾ.ಎಸ್.ಬಿ.ಕಾಮರೆಡ್ಡಿ, ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಡಾ.ಅರುಣಕುಮಾರ ಎಸ್.ಪಾಟೀಲ, ಜಿಪಂ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಸುಭಾಷ ರಾಠೋಡ ಅವರುಗಳು ಎಳೆ ಎಳೆಯಾಗಿ ಬಿಚ್ಚಿಟ್ಟರು.

Contact Your\'s Advertisement; 9902492681

ಕಾರ್ಯಕ್ರಮದ ಆರಂಭಕ್ಕೆ ಮಾತುಗಳನ್ನಾಡಿದ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಮಾಜಿ ಮುಖ್ಯಮಂತ್ರಿ ಡಾ.ಎನ್.ಧರ್ಮಸಿಂಗ್ ಹಾಗೂ ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದ ಎರಡು ಕಣ್ಣುಗಳಿದ್ದ ಹಾಗೆ. ಜಾತ್ಯತೀತ ಮನೋಭಾವದೊಂದಿಗೆ ಸುಧೀರ್ಘ ಐದು ದಶಕಗಳಿಗಿಂತ ಹೆಚ್ಚು ಸೇವೆ ನೀಡಿರುವ ಇವರು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿ ಎಂದು ಹೇಳಿದ ಅವರು, ಇಂಥ ಶ್ರೇಷ್ಠ ನಾಯಕರ ಜನ್ಮದಿನಾಚರಣೆಗಳು ಯಾವುದೇ ಒಂದು ಪಕ್ಷ ಅಥವಾ ಜಾತಿಗೆ ಸೀಮಿತಗೊಳಿಸದೇ ಸಾರ್ವತ್ರಿಕವಾಗಿ ಆಚರಿಸಬೇಕೆಂಬ ಆಶಯದೊಂದಿಗೆ ಅವರ ಜನ್ಮದಿನಾಚರಣೆ ಕೊರೊನಾದ ಇಂದಿನ ಸಂಧಿಗ್ಧ ಪರಿಸ್ಥಿತಿಯಿಂದ ಪಾರು ಮಾಡುವ ಸಣ್ಣ ಪ್ರಮಾಣದ ಪ್ರಾಮಾಣಿಕ ಪ್ರಯತ್ನದೊಂದಿಗೆ ಆಚರಿಸಲಾಗುತ್ತಿದೆ ಎಂದರು.

ಪ್ರಮುಖರಾದ ವೀರಣ್ಣಗೌಡ ಮಲ್ಲಾಬಾದಿ, ತುಕಾರಾಮಗೌಡ ಪಾಟೀಲ, ಮಹಾಂತೇಶ ಪಾಟೀಲ, ನಿಂಗಪ್ಪ ಜಗತಿ, ಶಿವಶರಣಪ್ಪ ಕೋಬಾಳ, ಶರಣಪ್ಪ ಅಂದಾನಿ, ರವೀಂದ್ರಕುಮಾರ ಭಂಟನಳ್ಳಿ, ಬಿ.ಎಂ.ಪಾಟೀಲ ಕಲ್ಲೂರ, ಪ್ರಭುದೇವ ಯಳವಂತಗಿ, ಸಂಗಣ್ಣಗೌಡ ಪಾಟೀಲ ಗುಳ್ಯಾಳ, ಡಾ.ಸಂಜೀವ ಎಂ.ವೈ.ಪಾಟೀಲ, ಪ್ರಕಾಶ ಜಮಾದಾರ ಮಾಶಾಳ, ಸಿದ್ಧು ಸಿರಸಗಿ, ಹುಲಿಕಂಠರಾಯ ಅರಳಗುಂಡಗಿ, ಲಕ್ಷ್ಮೀಪುತ್ರ ಜಮಾದಾರ, ಚಂದಪ್ಪ ಮಾಸ್ಟರ್, ಶರಣಗೌಡ ಪಾಟೀಲ, ಗಣೇಶ ಪಾಟೀಲ, ಹಣಮಂತ ಭೂಸನೂರ, ಬಸವರಾಜ ಮರತೂರ, ದೇವೇಂದ್ರಪ್ಪ ಕೊಳಕೂರ, ಶಾಂತಪ್ಪ ನಿಂಬಾಳ, ಹಣಮಂತಗೌಡ ಉದನೂg, ನಾಗೇಂದ್ರ ಕೋರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here