ಕಲಬುರಗಿ: ಮಹಾರಾಷ್ಟ್ರದಿಂದ ಕಲಬುರಗಿ ಆಕ್ರಮ ಒಂಟೆ ಸಾಗಿಸುತ್ತಿದ 6 ಜನರ ಆರೋಪಿಗಳು ಸೇರಿ ಎಂಟು ಒಂಟೆ ಗಳನ್ನು ಆಳಂದ ತಾಲ್ಲೂಕು ಆಡಳಿತ ಮಂಡಳಿ ಕಾರ್ಯಚರಣೆ ನಡೆಸಿ ನಿನ್ನೆ ರಾತ್ರಿ ವಶಪಡಿಸಿಕೊಂಡಿದ್ದಾರೆ.
ಆಳಂದ ತಹಸಿಲ್ದಾರ್ , ಉಪ ಪೋಲಿಸ್ ಅಧೀಕ್ಷಕರು, ಪೋಲಿಸ್ ಇನ್ಸ್ಪೆಕ್ಟರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಳಂದ, ರವರು ಜಂಟಿ ಕಾರ್ಯಾಚರಣೆ ನಡೆಸಿ ಎಂಟು ಒಂಟೆ ಗಳು ವಶಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು, ಇನ್ನೂ ಉಳಿದ ಒಂಟೆ ಗಳಿಗೆ ಶೋಧ ಕಾರ್ಯ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ ಮೋಟಗಿ ( ಕೇಶವ ) ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯಡಾ ಮಾಟಿ೯ನ್ ರವರು ಭೇಟಿ ನೀಡಿ ದೂರು ನೀಡಿದರು
ಕಾರ್ಯಚರಣೆಯಲ್ಲಿ ವಶಕ್ಕೆ ಪಡೆದುಕೊಂಡಿರುವ ಎಂಟು ಒಂಟೆ ಗಳು ಕಲಬುರಗಿ ಜಿಲ್ಲೆಯ ಹೊರ ವಲಯದ ಆಳಂದ ರಸ್ತೆಯಲ್ಲಿನ ನಂದಿ ಅನಿಮಲ್ ವೆಲ್ಫೇರ್ ಸೋಸೈಯಿಟಿ ಆಫ್ ಗುಲ್ಬರ್ಗಾ ಸಂಸ್ಥೆಯ ಗೋ ಶಾಲೆಗೆ ಸ್ಥಾಳಂತರಿಸಿ ಪೋಷಿಸಲಾಗುತ್ತಿದೆ.