ಕಲ್ಲು ನಾಗರಕ್ಕೆ ಹಾಲೆರೆಯುವುದು ಭಕ್ತಿ ಅಲ್ಲ-ಅದು ಮೌಡ್ಯಾಚರಣೆ: ಡಾ. ಈಶ್ವರಯ್ಯ ಮಠ

0
46

ಕಲಬುರಗಿ: ಕಲ್ಲು ನಾಗರಕ್ಕೆ ಹಾಲೆರಿಯುವುದು, ಗಿಡ ಮರಗಳನ್ನು ಸುತ್ತುವುದು, ನದಿಯ ನೀರಿನಲ್ಲಿ ಮುಳುಗಿ ಏಳುವುದು, ಭಕ್ತಿ ಅಲ್ಲ-ಅದು ಮೌಡ್ಯಾಚರಣೆ ಎಂದು ಎಂ.ಎಸ್. ಇರಾಣಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ: ಈಶ್ವರಯ್ಯ ಮಠ ಹೇಳಿದರು.

ಪ್ರಗತಿ ಅಭಿವೃದ್ಧಿ ಸಂಸ್ಥೆ, ಸಂಸ್ಕಾರ ಪ್ರತಿಷ್ಠಾನ, ಕಲಬುರಗಿ ಆರ್ಟ ಥೇಯಟರ್ ಅವರ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ಸಮೀಪದ ಹೀರಾಪೂರ ಗ್ರಾಮದಲ್ಲಿ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಅವರು, ಬಸವಣ್ಣನವರು ದುಡಿಯುವ ವರ್ಗಕ್ಕೆ ಧ್ವನಿಯಾಗಿ, ಧಮನಿತ ಸಮುದಾಯಕ್ಕೆ ಆಶ್ರ್ರಯಯಾಗಿ ಮೌಡ್ಯಾಚರಣೆಗಳನ್ನು ದಿಕ್ಕಿರಿಸಿದ ಮಹಾನ ಚಿಂತಕರಾಗಿದ್ದರು.

Contact Your\'s Advertisement; 9902492681

ಸಾಮಾನ್ಯ ಜನಗಳನ್ನು ಶರಣರೆಂದು, ಅಸಹಾಯಕ ಮತ್ತು ಅಶಕ್ತರನ್ನು ಜಂಗಮರೆಂದು ಆದರ್ಶಿಸಿದ ಅವರು ಚಳುವಳಿಯ ವಿಧಾನವು ಮಾತನಾಡುತ್ತಾ ಅಪ್ಪ ಬೊಪ್ಪ, ಹಿರಿಯರು, ಚಿಕ್ಕಪ್ಪ ನಮ್ಮಕ್ಕ ಅಪ್ಪಂದರೆಂದು ಶ್ರಮಿಕ ವರ್ಗದವರನ್ನು ತಬ್ಬಿಕೊಂಡರು. ಇವರೆಲ್ಲರು ನಮ್ಮವರೆಂದು ಸಾಕ್ಷತ್ ಕೂಡಲ ಸಂಗಮನೇ ಸ್ವರೂಪರೆಂದು ಗೌರವಿಸಿದರು. ಅಂತ ದಯಾನಿದಿಯಾಗಿದ್ದ ಬಸವಣ್ಣನವರ ನೆನಪಿನಲ್ಲಿ ಅಪೌಷ್ಠಿಕ ಮಕ್ಕಳಿಗೆ ಹಾಲು ಮತ್ತು ಖಜೂರನ್ನು ವಿತರಿಸುವುದು ಶ್ಲ್ಯಾಗನೀಯ ಕಾರ್ಯವೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಘನ ಉಪಸ್ಥಿತರಾಗಿದ್ದ ಕಲಬುರಗಿ ಶೂದ್ರ ಶಕ್ತಿ ದಿನಪತ್ರಿಕೆ ಸಂಪಾದಕ ಬಿ.ವಿ ಚಕ್ರವರ್ತಿ ರವರು ಮಾತನಾಡಿ ಬಸವ, ಬುದ್ಧ, ಅಂಬೇಡ್ಕರ ರವರ ವಿಚಾರಗಳು ಇಂದು ತಕ್ಕ ಮಟ್ಟಿಗೆ ಪ್ರಚಾರ ಪಡೆದಿವೆ. ಆದರೆ ಬರೀ ಭಾಷಣ, ಘೋಷಣೆಯಿಂದ ಸಮಾಜದಲ್ಲಿ ಬದಲಾವಣೆ ಆಗುವುದಿಲ್ಲ. ಆದರ್ಶ ವ್ಯಕ್ತಿಗಳು ಹೇಳಿದ ತತ್ವ ವಿಚಾರಗಳು ಬದುಕಿನಲ್ಲಿ ಆಚರಿಸುವುದು ಇಂದಿನ ಜರೂರಿಯಾಗಿದೆ ಎಂದು ಹೇಳಿದರು.

ಹೀರಾಪೂರ ಗ್ರಾಮದ ಹಿರಿಯರಾದ ಶಿವಯೋಗಿ ದೊಡ್ಡಮನಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ಮಾತನಾಡಿ ನಮ್ಮ ದೇಶದಲ್ಲಿ ಪ್ರತಿಶತ ೭೫% ರಷ್ಟು ಜನ ಇನ್ನೂ ಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ. ಸೂಕ್ತ ಶಿಕ್ಷಣ ನೀಡುವುದರ ಮೂಲಕ ಶೋಶಿತ ಜನಸಮುದಾಯದ ಬದುಕನ್ನು ಕಟ್ಟಬೇಕೆಂದು ಹೇಳಿದರು. ಹಸಿದವರ ಒಡಲು ತುಂಬಿ ಬಸವಳಿದವರ ಬದುಕು ಕಟ್ಟುವುದೇ ನಿಜವಾದ ಹಬ್ಬ ಅನಿಸುತ್ತದೆ. ಇಂತಹ ಹಬ್ಬವನ್ನು ಆಚರಿಸುವ ಕಾಲ ಬೇಗ ಬರಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಕಲಬುರಗಿ ಆರ್ಟ ಥಿಯಟರ್ ಅಧ್ಯಕ್ಷ ಸುನೀಲ ಮಾನಪಡೆಯವರು ಸ್ವಾಗತಿಸಿದರು, ಅಲ್ಲಮಪ್ರಭು ಅವರು ಪ್ರಾಸ್ತವಿಕ ನುಡಿಗಳನ್ನು ಹೇಳಿದರು. ಸಂಸ್ಕಾರ ಪ್ರತಿಷ್ಠಾನ ಸಂಸ್ಥೆಯ ನಿರ್ದೇಶಕರಾದ ವಿಠ್ಠಲ ಚಿಕಣಿಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ವೇದಿಕೆ ಮೇಲೆ ಹೀರಾಪೂರ ಗ್ರಾಮದ ವಿವಿಧ ಬಡಾವಣೆಯ ಮುಖಂಡರಾದ ರಾಜಶೇಖರ ಯಳಮೇಲಿ, ಪ್ರಕಾಶ ಮಾಲಿಪಾಟಿಲ, ಅಲ್ಲಮಪ್ರಭು ನಿಂಬರ್ಗಾ, ಶಿವಕುಮಾರ ಮದ್ರಿ, ರಾಜೇಂದ್ರ ಡಿಪ್ಪಿ, ಜಗನ್ನಾಥ ದಿಗ್ಸಂಗಿ, ಶರಣಗೌಡ ಬಿರಾದಾರ, ಬಾಬುರಾವ ಬಸಂತವಾಡಿ ಬೀರಪ್ಪ ಪೂಜಾರಿ, ಬ್ರಹ್ಮಾನಂದ ಮಿಂಚಾ ಹಾಗೂ ಇನ್ನಿತರರು ಇದ್ದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಖಜೂರು ಮತ್ತು ಹಾಲು ವಿತರಿಸುವ ಕಾರ್ಯಕ್ರಮವು ನೆರವೇರಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here