ಶರಣ ಚರಿತೆ: ಬೆಟ್ಟಬಲಕುಂದ ಸುತ್ತಲಿನ ಶರಣ ಸ್ಮಾರಕಗಳು

0
48

ಶರಣರು ಕೇವಲ ಬಸವಕಲ್ಯಾಣ ಪಟ್ಟಣದಲ್ಲಿ ಮಾತ್ರ ವಾಸವಾಗಿರಲಿಲ್ಲ. ಸುತ್ತಲಿನ ಪ್ರದೇಶದಲ್ಲಿ ಗುಂಪು ಗುಂಪಾಗಿ ನೆಲೆ ನಿಂತಿದ್ದರು. ಸಮೀದ ಎಲ್ಲರೂ ಸೇರಿಕೊಂಡು ವಿವಿಧ ಕಾಯಕ ಮಾಡುತ್ತ ಸತ್ಸಂಗ ನಡೆಸುತ್ತಿದ್ದರು ಎಂದು ಹೇಳಬಹುದಾಗಿದೆ. ಉತ್ತರಕ್ಕೆ ೫ ಕೀ. ಮೀ ದೂರದಲ್ಲಿರುವ ದೊಡ್ಡ ಬೆಟ್ಟ ಕಾಣಿಸುತ್ತದೆ. ಅಂತೆಯೇ ಇದನ್ನು ಮೊದಲಿನಿಂದಲೂ “ಬೆಟ್ಟ ಬಲಕುಂದ: ಬಸವಣ್ಣನವರ ಬೆಟ್ಟ” ಎಂದು ಕರೆಯುತ್ತಾರೆ. ಬೆಟ್ಟದ ಮೇಲ್ಮೈಯಲ್ಲಿ ಗಣಮೇಳ ವೈದಾನ, ಪಶ್ಚಿಮಕ್ಕೆ ಖಪರಾಳ ಕೆರೆ ಇದೆ.

ಅದರ ಮಗ್ಗುಲಿಗೆ ಗಂಜಿ ಕೆರೆ ಇದೆ. ಕೆರೆಯ ಈ ಪ್ರದೇಶವನ್ನು ಅಲ್ಲಿನ ಜನ ಈಗ ಒಕ್ಕಲುತನಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗುಡ್ಡದ ಹೊಟ್ಟೆ ಸೀಳಿ ಹೋದರೆ ಅಲ್ಲೊಂದು ಬಸವಣ್ಣನ ಗವಿ ಕಾಣುತ್ತದೆ. ಗುಡ್ಡದ ಇಳಿಜಾರು ಪ್ರದೇಶದಲ್ಲಿ ಸಣ್ಣ ಸಣ್ಣ ಗವಿಗಳಿವೆ. ಇಳಿಜಾರು ಪ್ರದೇಶದಲ್ಲಿ ಪೂಜಾಬಾವಿ ಇರುವುದನ್ನು ಗಮನಿಸಬಹುದು. ಗ್ರಾಮದೊಳಗೆ ಪ್ರವೇಶ ಮಾಡಿದರೆ ಹಡಪದರ ಮನೆಯಲ್ಲಿರುವ ದೀವಟಿಗೆ ಕಾಣಬಹುದು. ಊರಿನ ಜನರು ಸೇರಿ ಬಸವೇಶ್ವರ ದೇವಾಲಯ ಕಟ್ಟಿಕೊಂಡಿದ್ದಾರೆ.

ಬಂದವರ ಓಣಿಯಲ್ಲಿರುವ ಅಕ್ಕಮಹಾದೇವಿ ಗವಿಯ ಎದುರಿಗಿರುವ ನೀರಿನ ಹೊಂಡ
Contact Your\'s Advertisement; 9902492681

ಇಲ್ಲಿಂದ ೮ ಕಿ.ಮೀ. ದೂರ ಸಾಗಿದರೆ ಬೇಲೂರು ಸಿಗುತ್ತದೆ. ಅಲ್ಲೊಂದು ಸಿದ್ಧರಾಮೇಶ್ವರ ದೇವಾಲಯ ಇದೆ.ಅದರ ಮಗ್ಗುಲಿಗೆ ಕೆರೆ ಇರುವುದನ್ನು ಗಮನಿಸಬಹುದು. ಇಲ್ಲೊಂದು ವೀರಗಲ್ಲು ಕೂಡ ಇದೆ. ವಿಗ್ರಹದ ಕೈಯಲ್ಲಿ ಬಿಲ್ಲು ಇರುವುರಿಂದ ಅಲ್ಲಿನ ಜನ ಅದನ್ನು ಬಿಲ್ಲೇಶ ಬೊಮ್ಮಯ್ಯನ ಸ್ಮಾರಕ ಎಂದು ಉತ್ತರಿಸುತ್ತಾರೆ. ಈ ವಿಗ್ರಹದಿಂದಲೇ ನಮ್ಮ ಗ್ರಾಮಕ್ಕೆ ಈ ಹೆಸರು ಬಂದಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಉರಿಲಿಂಗ ಪೆದ್ದಿ ಇಬ್ಬರೂ ವಚನಗಳನ್ನು ಬರೆದಿರುವುದರಿಂದ ಇವರಿಬ್ಬರೂ ಬಸವಕಲ್ಯಾಣಕ್ಕೆ ಬಂದಿರಬಹುದು ಎಂದು ಹೇಳಬಹುದಾಗಿದೆ.

ನಂದವಾಡಗಿಯಲ್ಲಿಯೂ ಉರಿಲಿಂಗದೇವರ ಮಠ ಇದೆ. ಇದನ್ನು ಅವರೇ ಸ್ಥಾಪಿಸಿರಬಹುದು ಎಂದು ಹೇಳಲು ಬಲವಾದ ಸಾಕ್ಷಾಧಾರಗಳು ದೊರೆಯುತ್ತವೆ. ಇವರು ತಮ್ಮ ಶಿಷ್ಯ ಉರಿಲಿಂಗಪೆದ್ದಿಗೆ ಮಠವನ್ನು ಬಿಟ್ಟುಕೊಟ್ಟರು ಎಂಬುದಕ್ಕೆ ಸಾಕ್ಷಿಯಾಗಿ ಉರಿಲಿಂಗಪೆದ್ದಿಯ ಗದ್ದುಗೆ ಅಲ್ಲಿರುವುದನ್ನು ಕಾಣಬಹುದು. ಉರಿಲಿಂಗಪೆದ್ದಿಯ ವಂಶಜರ ಮನೆಯಿದ್ದು, ಇಂದಿಗೂ ಅದೇ ಮನೆಯವರೇ ಉರಿಲಿಂಗದೇವರ ಮಠಕ್ಕೆ ಕಟ್ಟಿಗೆ ತಂದು ಹಾಕುತ್ತಾರೆ ಎಂದು ಹೇಳಬಹುದು. ಇರುವುದನ್ನು ಕಾಣಬಹುದು. ಉರಿಲಿಂಗಪೆದ್ದಿ ನೀರು ಬರಿಸಿದ ಕೆರೆ ಕೂಡ ಅಲ್ಲಿ ಇದೆ. ಪ್ರಮಥರಾಗಿ, ಗುರುವಾಗಿ ಲಿಂಗದೀಕ್ಷೆ ಕೊಟ್ಟಿರುವುದನ್ನು ನಾವು ಕಾಣುತ್ತೇವೆ.

ಅಕ್ಕ ಮಹಾದೇವಿ ಗವಿ

ಇವರ ತರುವಾಯ ಬೇವಿನ ಚಿಂಚೋಳಿ ಗ್ರಾಮದ (೧೮೬೭ರಿಂದ ೧೯೪೭} ಅವಧಿಯಲ್ಲಿ ಬಾಳಿ ಬದುಕಿದ ತುಕಾರಾಮ ಎಂಬ ವ್ಯಕ್ತಿ ಕರ್ನಾಟಕದ ಎಲ್ಲೆಡೆ ಉರಿಲಿಂಗಪೆದ್ದಿ ಮಠ ನಿರ್ಮಾಣ ಮಾಡಿದರು. ಆ ಪರಂಪರೆಯನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲಲೇಬೇಕು. ಹಿಂದೊಮ್ಮೆ ರಾಜ್ಯಾದ್ಯಂತ ಕಾಲರಾ ಬೇನೆ ಉಲ್ಬಣವಾದಾಗ ೨೧ ದಿನ ಒಂಟಿಕಾಲಿನ ಮೇಲೆ ನಿಂತು ದೇವರನ್ನು ಪ್ರಾರ್ಥಿಸಿದರು.

ಬಂದವರ ಓಣಿಯ ದಟ್ಟವಾದ ಕಾಡು

ಹೀಗಾಗಿ ಆ ಗ್ರಾಮಕ್ಕೆ ಕಾಲಾರಾ ಬರಲಿಲ್ಲ ಎಂದು ಗ್ರಾಮಸ್ಥರು ತಿಳಿಸುತ್ತಾರೆ. ಹೀಗಾಗಿ ಅವರನ್ನು ಶಿವಯೋಗಿ, ಶರಣ ಹೆಸರಿನಿಂದ ಕರೆಯುತ್ತಿದ್ದರು. ಇವರೇ ಬೇಮಳಖೇಡ ಗ್ರಾಮದಲ್ಲಿ ಮೊಟ್ಟ ಮೊದಲು ಉರಿಲಿಂಗಪೆದ್ದಿಮಠ ಕಟ್ಟಿಸಿದವರು. ನಂತರ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಕೋಡ್ಲಾ ಗ್ರಾಮದಲ್ಲಿ ಮಠ ಕಟ್ಟಿದರು. ಇದುವೆ ಮುಖ್ಯ ಮಠವಾಗಬೇಕು ಎಂದು ಹೇಳುತ್ತಿದ್ದರು ಅವರು. ಹೈ.ಕ. ಭಾಗದಲ್ಲಿ ೧೧ ಮಠಗಳನ್ನು ಸ್ಥಾಪಿಸುತ್ತಾರೆ. ಮೈಸೂರು ಭಾಗದಲ್ಲಿ ೨೦ ಮಠಗಳನ್ನು ಸ್ಥಾಪಿಸಿದರು. ಇಂಥವರು ನಮಗೆಲ್ಲ ಮಾದರಿಯಾಗಬೇಕಿದೆ.

ಸ್ಥಳ: ಕಲ್ಬುರ್ಗಿ ಬಸವ ಸಮಿತಿಯ ಅನುಭವ ಮಂಟಪ
ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here