- ರಾಜು ಮುದ್ದಡಗಿ
ಜೇವರ್ಗಿ: ಇಲ್ಲಿನ ಯಡ್ರಾಮಿ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಯಡ್ರಾಮಿಯಲ್ಲಿ ಸಂಘದ ಸದಸ್ಯರಿಗೆ ಕೊವಿಡ 19ರ ಬಗ್ಗೆ ಬೀದಿ ನಾಟಕದ ಮೂಲಕ ಜನಜಾಗೃಯನ್ನು ಮೂಡಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕರಾದ ವಿಶ್ವನಾಥ್ ಹಾಗೂ ಜಗದೀಶ್ ಸೇರಿದಂತೆ ಪೊಲೀಸ್ ಠಾಣೆಯ ಎ.ಎಸ್.ಆಯ್ ರಾಜೇಂದ್ರ ಪ್ರಸಾದ್, ಬಸವೇಶ್ವರನ ಕಮಿಟಿಯ ಉಪಾಧ್ಯಕ್ಷರಾದ ಮಹಾನಿಂಗ ಸೇರಿದಂತೆ ಜೇವರ್ಗಿ ಮಾನ್ಯ ಯೋಜನಾಧಿಕಾರಿಗಳಾದ ಉಮಾವತಿ, ಸೇವಾ ಪ್ರತಿನಿಧಿಗಳಾದ ಶ್ರೀದೇವಿ ಮತ್ತು ಪಾರ್ವತಿ ಸೇರಿದಂತೆ, ಬೀದಿನಾಟಕದ ಮುಖ್ಯಸ್ಥರಾದ ವೆಂಕಟೇಶ್ವರ, ಜೇವರ್ಗಿ ತಾಲೂಕ ಮಹಿಳಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಂಕ್ರು ಬಾಯಿ ಕಾರ್ಯಕ್ರಮದಲ್ಲಿ ಉಸ್ಥಿತರಿದ್ದರು ಅಲ್ಲದೆ ಸಂಘದ ಮಹಿಳಾ ಸದಸ್ಯರು ಭಾಗವಹಿಸಿದ್ದರು.