- ರಾಜು ಮುದ್ದಡಗಿ
ಜೇವರ್ಗಿ :ತಂದೆಯಾಗಿ ನನ್ನ ರಾಜಕೀಯ ಜೀವನದ ಗುರುವಾಗಿ ಬದುಕು ನೀಡಿದವರು, ದಿವಂಗತ ಧರ್ಮಸಿಂಗ್ ರವರು ಅರದೇ ದಾರಿಯಲ್ಲಿ ನಡೆಯಲು ರಾಜಕೀಯದ ಪರಿಪಾಠ ಹಾಗೂ ಜನ ನಾಯಕರಾಗಲು ಸ್ಪೂರ್ತಿ ನೀಡಿದರು ಎಂದು ಡಾ .ಅಜಯ್ ಸಿಂಗ್ ತಿಳಿಸಿದರು. ಹೈದ್ರಾಬಾದ್ ಕರ್ನಾಟಕ ವಿಭಾಗದ ಮುಖ್ಯ ಮಂತ್ರಿಗಳಾಗಿ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಅಪರೂಪದ ರಾಜಕಾರಣಿ ದಿವಂಗತ ಧರಮ್ ಸಿಂಗ್ ಇವರು ರಾಜಕೀಯ ಚತುರರಾಗಿದ್ದರು ಎಂದು ತಿಳಿಸಿದರು .
೩ ನೇ ಪುಣ್ಯಸ್ಮರಣೆಯ ನಿಮಿತ್ಯ ಕಲಬುರಗಿಯ ನಿವಾಸ ಹಾಗೂ ಸ್ವಗ್ರಾಮ ನೆಲೋಗಿಯಲ್ಲಿ ಕುಟುಂಬದ ಸದಸ್ಯರು ಮತ್ತು ಅಪಾರ ಅಭಿಮಾನಿಗಳೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪೂಜೆ ತಂದೆ ಹಾಗೂ ರಾಜಕೀಯ ಗುರುಗಳಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿದರು.
ಇಡೀ ರಾಜ್ಯದ ರಾಜಕಾರಣಕ್ಕೆ ಅವರೊಬ್ಬ ಅಪರೂಪದ ರಾಜಕಾರಣಿಯಾಗಿದ್ದು ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುವ ಸ್ವಭಾವದವರಾಗಿದ್ದರು, ಅಲ್ಲದೆ ಎಲ್ಲ ಜನಾಂಗದ ಜನರನ್ನು ಹಾಗೂ ಸಮಾಜದ ನಾಯಕರನ್ನು ಅತ್ಯಂತ ಆತ್ಮೀಯತೆಯಿಂದ ಹಾಗೂ ಸ್ನೇಹಪೂರ್ವಕವಾಗಿ ಮಾತನಾಡಿಸುತ್ತಿದ್ದರು ಇವರಿಗೆ ಯಾರು ವಿರೋಧಿಗಳೇ ಇರಲಿಲ್ಲ ಆದ ಕಾರಣ ಇವರನ್ನು ಅಜಾತಶತ್ರು ಎಂದೆ ಕರೆಯಲಾಗಿತ್ತು ಎಂದು ತಿಳಿಸಿದರು.
ಡಾ. ಅಜಯ್ ಸಿಂಗ್ ಶಾಸಕರು ಜೇವರ್ಗಿ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಪೂಜ್ಯ ತಂದೆಯವರ ದಾರಿಯಲ್ಲಿ ನಡೆದು ರಾಜಕೀಯ ಜೀವನದಲ್ಲಿ ಒಳ್ಳೆ ಸಾಧನೆಯನ್ನು ಮಾಡಲು ನಮ್ಮ ತಂದೆಯವರಿಗೆ ನೀಡಿದಂತೆ ಸಹಾಯ ಸಹಕಾರವನ್ನು ಸಲಹೆಗಳನ್ನು ನೀಡಲು ವಿನಂತಿಸಿದರು .ಸ್ವಗ್ರಾಮ ನೆಲೊಲಗಿಯಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರ ಜೊತೆ ಸರಳ ರೀತಿಯಲ್ಲಿ ಪುಣ್ಯಸ್ಮರಣೆಯನ್ನು ಆಚರಿಸಿದರು.