ಕಲಬುರಗಿ: ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿ ಆಸ್ಪತ್ರೆಗೆ ಸೇರಿಸಲು ಅಲೆದಾಡುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿಯೇ ರೋಗಿ ಸಾವನಪ್ಪಿರುವ ಘಟನೆ ಕಲಬುರಗಿಯಲ್ಲಿ ಇಂದು ನಡೆದಿದ್ದು, ಕುಟುಂಬಸ್ಥರು ಆಟೋದಲ್ಲಿ ಮೃತ ವ್ಯಕ್ತಿಯ ಶವವನ್ನು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೇ ತಂದು ಚಿಕಿತ್ಸೆಗೆ ನಿರಾಕರಿಸಿದ ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ನಗರದ ಅಕ್ಬರ ಬಾಗ್ ಕಾಲೋನಿಯ ನಿವಾಸಿಯಾದ ಮಹ್ಮದ್ ಅಯೂಬ್ (38) ಮೃತ ವ್ಯಕ್ತಿ. ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆ ಅಯೂಬ್ನನ್ನು ಜಯದೇವ ಆಸ್ಪತ್ರೆಗೆ ಕರೆ ತರಲಾಗಿತ್ತು. ಕೊರೊನಾ ನೆಗೆಟಿವ್ ವರದಿ ಬಂದರೂ ಸಹ ರೋಗಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಿಲ್ಲ. ಬಳಿಕ ಮೂರ್ನಾಲ್ಕು ಆಸ್ಪತ್ರೆಗಳನ್ನು ಸುತ್ತುವಷ್ಟರಲ್ಲಿ ಸಾವು ಸಂಭವಿಸಿದೆ ಎಂದು ಆಯೂಬ್ ಸಹೋದರ ತಿಳಿಸಿದ್ದಾರೆ.
ತಾವೇ ಸ್ಟ್ರೆಚರ್ನಲ್ಲಿ ಕೊಂಡೊಯ್ದರೂ ಸಹ ಚಿಕಿತ್ಸೆ ನೀಡಲಿಲ್ಲ. ಬಸವೇಶ್ವರ ಆಸ್ಪತ್ರೆ ಸೇರಿ ಎಲ್ಲಾ ಕಡೆಯೂ ಬೆಡ್ ಫುಲ್ ಆಗಿವೆ ಎಂದು ಹೇಳುತ್ತಾರೆ ಎಂದು ಅರ್ಧ ಗಂಟೆ ಜಿಲ್ಲಾಧಿಕಾರಿ ಕಚೇರಿ ಬಳಿಯೇ ಶವ ಇಟ್ಟುಕೊಂಡು ನಂತರ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಮೊನ್ನೆಯೂ ವಾಡಿ ಪಟ್ಟಣದ ಮಹಿಳೆ ವೆಂಟಿಲೇಟರ್ ಸಿಗದೆ ಒಂದು ಸಾವನಪ್ಪಿದ್ದು, ಈವರೆಗೆ ಆರು ಜನ ನಾನ್ ಕೋವಿಡ್ ರೋಗಿಗಳು ಇದೇ ರೀತಿ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಓರ್ವ ಸಂಸದರು, ಇಬ್ಬರು ಶಾಸಕರು ವೈದ್ಯಪದವಿ ಪಡೆದಿದ್ದು, ತಮ್ಮದೇ ಸರಕಾರದಲ್ಲಿ ಕಲಬುರಗಿಯಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ ಇಲ್ಲದೆ ಜನರು ಸಾವನಪ್ಪುತಿದ್ದರು. ಮೌನವಹಿಸಿದ್ದಾರೆ.
ಜನಪ್ರತಿನಿಧಿ ಮತ್ತು ಆರೋಗ್ಯ ಇಲಾಖೆ ಈ ನಡೆ ಜನರಲ್ಲಿ ಆತಂಕ ಮುಡಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಸೌಲಭ್ಯಗಳ ವಿರುದ್ಧ ಹಲವು ಪ್ರಶ್ನೆಗಳಿಗೆ ದಾರಿ ಮಾಡಿಕೊಡುವಂತೆ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.