ಶಹಾಪುರ: ಶರಣ ತತ್ಹಗಳ ಪ್ರಸಾರಕ, ಪತ್ರಕರ್ತ ದಿಟ್ಟ ಬರಹಗಾರ ವಿಶ್ವಾರಧ್ಯ ಸತ್ಯಂಪೇಟೆಯವರ ಮೇಲೆಮ ದಾವಣಗೇರೆಯ ಹೊನ್ನಾಳಿಯಲ್ಲಿ ದಾಖಲಿಸಿರುವ ಕೇಸ ಹಿ೦ಪಡೆಯಬೇಕೆಂದು ಒತ್ತಾಯಿಸಿ ಎಸ್.ಡಿ.ಪಿ.ಐ ಪಕ್ಷದ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಕಲಂ 505 ಅಡಿಯಲ್ಲಿ ಕೇಸ್ ದಾಖಲಿಸಿದ ಶಕ್ತಿಗಳು ಸನಾತನವಾದಿಗಳಾಗಿದ್ದಾರೆ, ಅವರು ಎಂದು ವೈಜ್ಞಾನಿಕ, ವೈಚಾರಿಕತೆಗೆ ತಮ್ಮನ್ನು ತಾವು ತೆರೆದುಕೊಳ್ಳುವವರಲ್ಲ. ಸತ್ಯಂಪೇಟೆಯವರ ಲೇಖನ ಬರಹ ಯಾವತ್ತೂ, ಜನಪರ ಹಾಗೂ ಜೀವಪರವಾಗಿರುವುದು ಇಂಥ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ನೇಪವಾಗಿ, ನಿರ್ಲಕ್ಷಿಬಹುದಾದ ಸಂಗತಿಯ ಮೇಲೆ ಕೇಸ್ ಮಾಡಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವುದು ಖಂಡನೀಯವಾಗಿದೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷರಾದ ಇಸಾಕ್ ಹುಸೇನ್ ಖಾಲಿದ್ ಹೇಳಿದರು.
ಪ್ರಸ್ತುತ ವಿಶ್ವಾರಧ್ಯ ಸತ್ಯಂಪೇಟೆ ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯದರ್ಶಿಯಾಗಿದ್ದು ನಾಡಿನ ತುಬೆಲ್ಲ ಈಗಾಗಲೇ ಬುದ್ಧ ಬಸವ ಅ೦ಬೇಡ್ಕರ ಪೆರಿಯಾರ ಪುಲೆ ತತ್ವಗಳನ್ನು ತಿಳಿಸುತ್ತಾ ಮುನ್ನಡೆದಿದ್ದಾರೆ. ಸತ್ಯಂಪೇಟೆಯವರ ಪ್ರಗತಿಪರವಾದ. ಚಿ೦ತನಹರವಾದ, ಸಾಮಾಜಿಕ ಸುಧಾರಣೆಯ ಬರಹಗಳು ಹಲವರಿಗೆ ಮಗ್ಗುಲ ಮುಳ್ಳಾಗಿದೆ. ಆದ್ದರಿಂದಲೆ ಅ ಸನಾತನ ಶಕ್ತಿಗಳನ್ನು ಅವರ ಅಭಿವ್ಯಕ್ತಿಯನ್ನು ಕೇಸ್ ದಾಖಲಿಸುವ ಮೂಲಕ ಹತ್ತಿಡಲು ಬಯಸುತ್ತಿವೆ ಎಂದವರು ದೂರಿದರು.
ಸಾಮಾಜಿಕ ಜಾಲತಾಣದಲ್ಲಿ ರಾಂಪುರ ಹೊನ್ನಾಳಿಯ ಮಠಾಧೀಶರ ಅವ್ಯಜ್ಞಾನಿಕ ನಡಾವಳಿಗಳನ್ನು ಪ್ರಶ್ನಿಸಿದ್ದೇ ಬಹುದೊಡ್ಡ ಅಪರಾಧವೆಂಬಂತೆ ಬಿ೦ಬಿಸಿ ಪೋಲಿಸರ ಮೇಲೆ ಒತ್ತಡ ತಂದು ಕೇಸ್ ದಾಖಲಿಸಿದ್ದಾರೆ. ಈ ಕುರಿತು ಸತ್ಯಂಪೇಟೆಯವರು ಆಗಲೇ ವಿಷಾದ ವ್ಯಕ್ತಪಡಿಸಿದರೂ ವಿನಾಕಾರಣ ಒಲ್ಲದ ಗ೦ಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಸತ್ಯಂಪೇಟೆಯವರ ಮೇಲೆ ದ್ವೇಷ ಪೂರಿತವಾದ ಭಾವನೆ ಇಟ್ಟುಕೊಂಡಿವೆ. ಎಂದು ತಿಳಿಸಿದರು.
ಜವಾಬ್ದಾರಿಯುತ ಬರಹಗಾರ, ಪತ್ರಕರ್ತ. ಶರಣ ಸಾಹಿತಿಯನ್ನು ಹೇಗೆ ಎನಾಕಾರಣ ಇಕ್ಕಟ್ಟಿಗೆ ಸಿಕ್ಕಿಸುವ ಮೂಲಕ ಅವರ ಅಭಿವ್ಯಕ್ತಿಯನ್ನು ಹತ್ತಿಡಲು ಬಯಸುವುದು ನಿಜಕ್ಕೂ ಖಂಡನಾರ್ಹ ಸಂಗತಿಯಾಗಿದೆ. ಕರ್ನಾಟಕ ಸರಕಾರ ಯಾರದೋ ಪಿತೂರಿಗೆ ಒಳಗಾಗದೆ ಒಬ್ಬ ಪ್ರಜ್ಞಾವಂತ ಬರಹಗಾರನಿಗೆ ರಕ್ಷಣೆ ನೀಡಿ. ಈಗಾಗಲೇ ದಾಖಲಾಗಿರುವ ಕೇಸ್ ಕೂಡಲೇ ಹಿ೦ಪಡೆಯಬೇಕು. ಇಲ್ಲದಿದ್ದರೆ ನಮ್ಮ ಪಕ್ಷದ ಒತಿಯಿ೦ದ ರಾಜ್ಯಾದಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮನವಿ ಪತ್ರದಲ್ಲ ತಿಳಿಸಲಾಗಿದೆ.
Tadalafil cheap buy cialis online cialis 20mg