ಮಹಿಳಾ ವಸತಿ ನಿಲಯಕ್ಕೆ ಡಿ.ವಿ.ಪಾಟೀಲ ಹೆಸರಿಡಿ

0
67

ಕಲಬುರಗಿ: ವೈಯಕ್ತಿಕ ಹಿತಾಸಕ್ತಿಗಿಂತ ಸಮಾಜದ ಹಿತವನ್ನೇ ಸದಾ ಬಯಸಿ ಸಮಾಜದ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ಮೀಸಲಿಟ್ಟಿದ್ದ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದ ಲಿಂ.ಡಿ.ವಿ.ಪಾಟೀಲ ಅವರ ಹೆಸರನ್ನು ನಗರದ ದರಿಯಾಪುರ-ಕೋಟನೂರ ಲೇಔಟ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ವೀರಶೈವ ಮಹಿಳಾ ವಸತಿ ನಿಲಯಕ್ಕೆ ಹೆಸರಿಡುವ ಮೂಲಕ ಅವರ ಪ್ರಾಮಾಣಿಕ ಸೇವೆಯನ್ನು ಶಾಶ್ವತವಾಗಿ ಜೀವಂತವಾಗಿಡುವ ಕೆಲಸ ಮಾಡಬೇಕು ಎಂದು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕಾರ್ಯಾಧ್ಯಕ್ಷ ಶಿವರಾಜ ಎಸ್.ಅಂಡಗಿ ಮನವಿ ಮಾಡಿದ್ದಾರೆ.

ತಮ್ಮ ತ್ಯಾಗ ಮತ್ತು ಸೇವೆಯ ಮೂಲಕ ಸರ್ವ ಜನಾಂಗದ ಜನರಲ್ಲಿ ಉತ್ತಮ ಛಾಪು ಮೂಡಿಸಿದ್ದ ಲಿಂ.ಡಿ.ವಿ.ಪಾಟೀಲರು ಇಡೀ ಸಮಾಜವೇ ತಮ್ಮ ಕುಟುಂಬ ಎಂದು ಅಂದುಕೊಂಡು, ಸಮಾಜಕ್ಕಾಗಿ ತಮ್ಮ ಜೀವನವನ್ನೇ ಅರ್ಪಣೆ ಮಾಡಿಕೊಂಡರು. ಹಾಗಾಗಿ, ಅವರ ತ್ಯಾಗಮಯ ಬದುಕು ಇಂದಿನ ಸಮಾಜಕ್ಕೆ ಮಾದರಿ. ಲಿಂಗಾಯತರಿಗೆ ಡಿ.ವಿ.ಪಾಟೀಲರು ಧೈರ್ಯದ ನಿಧಿಯಂತೆ ಇದ್ದರು.

Contact Your\'s Advertisement; 9902492681

ಹಾಗಾಗಿ, ಅಂಥ ತ್ಯಾಗಮಯಿ ವ್ಯಕ್ತಿಯ ಹೆಸರನ್ನು ಮಹಿಳಾ ವಸತಿ ನಿಲಯಕ್ಕೆ ಇಡುವ ಮೂಲಕ ಲಿಂ.ಡಿ.ವಿ.ಪಾಟೀಲರ ಆತ್ಮಕ್ಕೆ ನಿಜವಾದ ಶಾಂತಿ ದೊರಕುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here