ಕಾಂಗ್ರೆಸ್ ನೀಡಿರುವ 450 ಬೆಡ್ ಗಳನ್ನು ಬಳಸಲು ಆಗ್ರಹಿಸಿ ಶಾಸಕ ಖರ್ಗೆ ನೇತೃತ್ವದಲ್ಲಿ ಪ್ರತಿಭಟನೆ

0
90

ಕಲಬುರಗಿ: ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣದಿಂದ ಜಿಲ್ಲಾಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್‌ಗಳ ಅಭಾವದಿಂದಾಗಿ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, 450 ಬೆಡ್‌ಗಳನ್ನು ಜಿಲ್ಲಾಡಳಿತಕ್ಕೆ ಕಳುಹಿಸಿ ಕೊಡಲಾಗಿತ್ತು. ಆದರೆ, ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳ ಒತ್ತಡ ಹಾಗೂ ಕೆಟ್ಟ ರಾಜಕೀಯದಿಂದಾಗಿ ಈ ಬೆಡ್‌ಗಳನ್ನು ಈವೆರಗೂ ಸ್ವೀಕರಿಸಿಲ್ಲ ಎಂದು ಅರೋಪಿಸಿ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಪ್ರತಿಭಟನೆ ನಡೆಸಿದ ಅವರು, ಬಹುಶಃ ಕಾಂಗ್ರೆಸ್‌ನವರು ನೀಡಿದ ಬೆಡ್‌ಗಳೆಂದು ಇವುಗಳನ್ನು ಬಳಸಿಕೊಳ್ಳುತ್ತಿಲ್ಲದ ಕಾರಣ, ಈಗ ಆ ಬೆಡ್‌ಗಳ ಮೇಲೆ ಮೋದಿ ಮತ್ತು ಯಡಿಯೂರಪ್ಪನವರ ಚಿತ್ರಗಳನ್ನು ಮುದ್ರಿಸಿ ನೀಡಲಾಗಿದೆ. ಇನ್ನಾದರೂ ಈ ಬೆಡ್‌ಗಳನ್ನು ಬಳಸಿಕೊಂಡು‌ ಜಿಲ್ಲಾಡಳಿತವು ಸೋಂಕಿತರ ಆರೈಕೆ ಮಾಡಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಕೆಪಿಸಿಸಿ ವತಿಯಿಂದ 550 ಬೆಡ್‌ಗಳನ್ನು ಖರೀದಿಸಿ, ಕಲಬುರಗಿಗೆ ತರಲಾಗಿತ್ತು. ಇವುಗಳಲ್ಲಿ 100 ಬೆಡ್‌ಗಳನ್ನು ಬಳಸಿಕೊಂಡು ಚಿತ್ತಾಪುರದ ನಾಗಾವಿ ಬಳಿ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಿ, ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಜಿಲ್ಲಾಸ್ಪತ್ರೆಗಳ ಮೇಲಿನ ಒತ್ತಡ ತಕ್ಕಮಟ್ಟಿಗೆ ಕಡಿಮೆಯಾಗಿದೆ ಎಂದರು‌.

ಕೊರೋನಾ ನಿಯಂತ್ರಿಸಲು ಕಾಂಗ್ರೆಸ್ ಪಕ್ಷವು ಸಹಕಾರ ನೀಡುತ್ತಿಲ್ಲವೆಂದು ಬಿಜೆಪಿಯವರು ವೃಥಾ ಆರೋಪ ಮಾಡುತ್ತಿದ್ದಾರೆ. ಆದರೆ, ನಾವೇ ದುಡ್ಡು ಕೊಟ್ಟು ಬೆಡ್‌ಗಳನ್ನು ಖರೀದಿಸಿ ಕೊಟ್ಟರೂ, ಅವುಗಳನ್ನು ಬಳಸಿಕೊಂಡು ಸೋಂಕಿತರಿಗೆ ಚಿಕಿತ್ಸೆ‌ ನೀಡುವ‌ ಬದಲು ಕೆಟ್ಟ ರಾಜಕೀಯದಲ್ಲಿ ಬಿಜೆಪಿ ತೊಡಗಿಕೊಂಡಿದೆ.

ಜನರು ಬೆಡ್‌ಗಳಿಲ್ಲದೇ ಪರದಾಡುತ್ತಿರುವುದು‌ ದಿನನಿತ್ಯವೂ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಬೆಡ್‌ಗಾಗಿ ಕಲಬುರಗಿಯ ಎಲ್ಲಾ ಆಸ್ಪತ್ರೆಗಳಿಗೂ ಭೇಟಿ ನೀಡಿ, ಕೊನೆಗೂ ಬೆಡ್ ದೊರಕದೇ ಆಟೋದಲ್ಲೇ ಅಸುನೀಗಿದ್ದಾರೆ. ಇಷ್ಟಾದರೂ ಬಿಜೆಪಿ ಸರ್ಕಾರಕ್ಕೆ ಮನಕಲುಕಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಈ ಕೂಡಲೇ ಉಸ್ತುವಾರಿ ಸಚಿವರು ನಾವು ನೀಡಿರುವ ಬೆಡ್‌ಗಳನ್ನು ಸ್ವೀಕರಿಸಲು ದೊಡ್ಡ ಮನಸ್ಸು‌ ಮಾಡಬೇಕು. ಪ್ರಿಯಾಂಕ್ ಅಥವಾ ಕಾಂಗ್ರೆಸ್ ಪಕ್ಷಕ್ಕಾಗಿ ಅಲ್ಲ, ಜನರಿಗಾಗಿ ದೊಡ್ಡ ಮನಸ್ಸು ಮಾಡಿ, ಈ ಬೆಡ್‌ಗಳನ್ನು ಬಳಸಿಕೊಂಡು‌ ಕಲಬುರಗಿ ಜಿಲ್ಲೆಯಲ್ಲಿ “ಚಿತ್ತಾಪುರ ಮಾದರಿ”ಯ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ, ಜನರಿಗೆ‌ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಬೇಕೆಂದು ಇಂದಿನ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.

,ಈ ವೇಳೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆಲಂ ಪ್ರಭು ಪಾಟೀಲ್ ಜಗದೇವ್ ಗುತ್ತೇದಾರ, ಕಿರಣ್ ದೇಶ್ಮುಖ್, ಮಾಜಿ ಪಾಲಿಕೆ ಸದಸ್ಯ ಶಫಿ ಹುಂಡೇಕರ್ , ಕಾರ್ತೀಕ್ ನಾಟೇಕರ್, ಮಹಮೂದ್ ಪಟೇಲ್, ಸಚೀನ್ ಸರ್ವಾಲ್, ಮೋದಿನ್ ಪಟೇಲ್ ಅಣಬಿ, ಅವೈಜ್ ಶೈಕ್, ಸಾಜಿದ ಅಲಿ ರಂಜೋಳವಿ, ಶಕಿಲ ಸರಡಗಿ, ಚೆತನ ಗೋನಾಯಕ, ಇರಣ಼ ಝಳಕಿ, ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಇದ್ದರು‌.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here