ಸುರಪುರ: ಕಳೆದ ೨೭ ರಂದು ಕೊರೊನಾ ಸೊಂಕಿನಿಂದ ನಿಧನರಾದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರಿಗೆ ದಿ ರಿಕ್ರಿಯೇಷನ್ ಕ್ಲಬ್ ವತಿಯಿಂದ ನುಡಿ ನಮನ ಕಾರ್ಯಕ್ರಮ ನಡೆಸಲಾಯಿತು.
ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖಂಡ ರಾಜಾ ಮದನಗೋಪಾಲ ನಾಯಕ ಮಾತನಾಡಿ, ನಮ್ಮ ಮೆಚ್ಚಿನ ಸಾಂಸ್ಕೃತಿಕ ರಾಯಭಾರಿಯವರ ನೆನಪು ಸದಾ ಕಾಡುತ್ತಿದೆ. ಅವರು ನಮ್ಮ ತಾಲೂಕಿನ ಅಭೀವೃಧ್ಧಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಅವರದ್ದೆ ಆದ ಚಾಪುಮೂಡಿಸಿದ ವ್ಯಕ್ತಿತ್ವ ಅವರದಾಗಿತ್ತು. ಅವರ ಅಗಲಿಕೆಯಿಂದಾಗಿ ನೋವುಂಟಾಗಿದೆ ಅವರು ಹಾಕಿದ ಮಾರ್ಗದಲ್ಲಿ ನಾವು ನಡೆದುಕೊಂಡು ಅವರುಗಳು ನಡೆಸಿಕೊಂಡು ಬಂದಿರುವ ಕಾರ್ಯಕ್ರಮಗಳನ್ನು ನಾವು ಮುಂದುವೆರೆಸುವ ಮುಖಾಂತರ ಅವರಿಗೆ ಶ್ರದ್ಧಾಂಜಲಿ ಅರ್ಪಿಸೋಣ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ನ್ಯಾಯವಾದಿಗಳಾದ ಬಸಲಿಂಗಪ್ಪ ಪಾಟೀಲ್, ಜೆ.ಅಗಸ್ಟೀನ್,ಬಸವರಾಜ ಜಮದ್ರಖಾನಿ,ಸಲೀಂ ವರ್ತಿ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಶ್ರೀನಿವಾಸ ಜಾಲವಾದಿ, ಕಿಶೋರಚಂದ ಜೈನ ಮಾತನಾಡಿದರು.ಇದೇ ಸಂದರ್ಭದಲ್ಲಿ ರಾಜಾ ಮದನಗೋಪಾಲ ನಾಯಕ ಹಾಗು ಸಾಹಿತಿ ಪಾಂಡುರಂಗ ಚಿನ್ನಾಕಾರ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮೌನಾಅಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.
ಸಭೆಯಲ್ಲಿ ರಾಘವೇಂದ್ರ ಬಾಡಿಹಾಳ, ಲಕ್ಷ್ಮಣ ಗುತ್ತೆದಾರ, ಗೋವರ್ಧನ ಜವ್ಹಾರ್, ಎಸ್.ಎನ್.ಪಾಟೀಲ, ರಾಕೇಶ ಹಂಚಾಟೆ, ಅಮೀನರೆಡ್ಡಿ, ಸುಭಾಶ ಬೊಡಾ, ರಾಜಶೇಖರ ದೇಸಾಯಿ, ಶಾಂತುಬಾರಿ, ಮಂಜುನಾಥ ಜಾಲಹಳ್ಳಿ, ರಾಘವೇಂದ್ರ ಭಕ್ರಿ ಸೇರಿದಂತೆ ಇನ್ನಿತರರಿದ್ದರು.