ಅಂಗನವಾಡಿ ಆಶಾ ಬಿಸಿಯೂಟ ನೌಕರರ ಬೇಡಿಕೆ ಈಡೇರಿಸಲು ಪ್ರತಿಭಟನೆ

0
99

ಸುರಪುರ: ಅಂಗನವಾಡಿ ಆಶಾ ಮತ್ತು ಬಿಸಿಯೂಟದ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಎಯಟಿಯುಸಿ ಮತ್ತು ಎಐಯುಟಿಯುಸಿ ಸಂಘಟನೆಗಳ ನೇತೃತ್ವದಲ್ಲಿ ತಹಸೀಲ್ ಕಚೇರಿ ಮುಂದೆ ಪ್ರತುಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ಮಾತನಾಡಿ, ಅಂಗನವಾಡಿ ಕಾರ್ಯಕರ್ತರಿಗೆ ಮಾಸಿಕ ೨೧ ಸಾವರ ಮತ್ತು ಆಶಾಕಾರ್ಯಕರ್ತೆಯರಿಗೆ ೧೨ ಸಾವಿರ ಹಾಗೂ ಬಿಸಿಐಊಟ ಕಾರ್ಮಿಕರಿಗೆ ೧೦ ಸಾವಿರ ವೇತನ ನಿಗದಿಗೊಳಿಸಿ ಅವರ ಸೇವೆಯನ್ನು ಖಾಯಂಗೊಳಿಸಬೇಕು ಮತ್ತು ಕೋವಿಡ್-೧೯ ಸಂದರ್ಭದಲ್ಲಿ ಸೇವೆಯಲ್ಲಿದ್ದಾಗ ಕೊರೊನಾ ಸೊಂಕಿಗೊಳಗಾದರೆ ೧೦ ಲಕ್ಷ ಪರಿಹಾರ ನೀಡಬೇಕು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಕೊರೊನಾ ಸೇವೆಗಾಗಿ ಪಿಪಿಇಟಿ ಕಿಟ್ ಫೀವರ್ ಚೆಕ್ ಮಷೀನ್ ಮಾಸ್ಕ್ ಹಾಗೂ ಸ್ಯಾನಿಟೈಜರ್ ನೀಡಬೇಕು ಎಂದರು.

Contact Your\'s Advertisement; 9902492681

ನಂತರ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯೋಜನಾ ಕಾರ್ಮಿಕರನ್ನು ಕಡೆಗಣಿಸುತ್ತಾ ಬಂದಿವೆ ಈ ಕರೊನಾ ಸಂಧರ್ಭದಲ್ಲಿ ತಮ್ಮ ಜೀವನವನ್ನು ಪಣಕ್ಕಿಟ್ಟು ಆಶಾ ಮತ್ತು ಅಂಗನವಾಡಿಕಾರ್ಯಕರ್ತರು ಜನರಬಳಿ ತೆರಳಿ ವೈರಸ್ ಕುರಿತು ಜಾಗೃತಿ ಮೂಡಿಸಿದ್ದಾರೆ ಮತ್ತು ಸೈನಿಕರಂತೆ ಈ ವೈರಸ್‌ನ ವಿರುದ್ಧ ಹೋರಾಟ ನಡೆಸಲು ಸರ್ಕಾರದ ಆದೇಶಗಳನ್ನು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ ಇತಂಹ ಕರ್ಯಕತೇಯರ ಬಹುದಿನಗಳ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಸುತ್ತಿರುವುದು ಸರಿಯಲ್ಲ ತಕ್ಷಣವೆ ಸರ್ಕಾರಗಳು ಎಚ್ಚೆತ್ತುಕೊಂಡು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ನಂತರ ರಾಜ್ಯಪಾಲರಿಗೆ ಬರೆದ ವಿವಿಧ ಬೆಡಿಕೆಗಳುಳ್ಳ ಮನವಿಯನ್ನು ಗ್ರೇಡ್-೨ ತಹಶೀಲ್ದಾರ್ ಸೋಫಿಯಾ ಸುಲ್ತಾನ್ ಅವರ ಮೂಲಕ ಸಲ್ಲಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಯಲ್ಲಪ್ಪ ಚಿನ್ನಾಕಾರ, ಶರಣಗೌಡ, ರಫೀಕ್ ಸುರಪುರ, ಬಸಮ್ಮ ದೊರೆ ಆಲ್ಹಾಳ, ನಸೀಮಾ ಮುದನೂರು, ರಾಧಾ ಸುರಪುರ, ಪ್ರಭಾವತಿ, ಸುಗಮ್ಮ, ನಿರ್ಮಲಾ, ಶ್ರೀದೇವಿ ಕೂಡಲಗಿ, ಯಮುನಾ ಕಕ್ಕೇರಿ, ರಾಜೇಶ್ವರಿ, ಶೈಜಾದಿ ಬೇಗಂ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here