ಬೇಗೂರ ಅತ್ಯಾಚಾರ ಪ್ರಕರಣ ಖಂಡಿಸಿ ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಪ್ರತಿಭಟನೆ

0
60

ಶಹಾಬಾದ: ಧಾರವಾಡ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೇಗೂರ ಗ್ರಾಮದಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಗುರುವಾರ ವೀರಶೈವ ಲಿಂಗಾಯತ ಯುವ ವೇದಿಕೆ ಮುಖಂಡರು ಪ್ರತಿಭಟನೆ ನಡೆಸಿ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಕಾರರು ಧಾರವಾಡ ಜಿಲ್ಲೆಯ ಬೇಗೂರ ಗ್ರಾಮದ ಪೂಜಾ ಎನ್ನುವ ಯುವತಿ ಮೇಲೆ ಪಕ್ಕದ ಗ್ರಾಮ ಸಿಂಗನಹಳ್ಳಿಯ ಬಷೀರ್ ಎಂಬ ಕಾಮುಕ ಅತ್ಯಾಚಾರ ಎಸಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ.

Contact Your\'s Advertisement; 9902492681

ಅತ್ಯಾಚಾರ ನಡೆಸಿದ ಕಾಮುಕನಿಗೆ ಸರಕಾರ ಮರಣದಂಡನೆಯಂತಹ ಕಠಿಣ ಶಿಕ್ಷೆಗೆ ಒಳಪಡಿಸಬೇಕು.ಅಂದಾಗ ಮಾತ್ರ ಮುಂದೆ ಇಂತಹ ಘಟನೆಗಳಿಗೆ ಕಡಿವಾಣ ಸಾಧ್ಯ.ಅಲ್ಲದೇ ಇಂತಹ ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆ ವಿಳಂಬವಾಗುತ್ತಿರುವುದರಿಂದ ಮತ್ತೆ ಪ್ರಕರಣಗಳು ಮರುಕಳಿಸುತ್ತಿವೆ.ಆದ್ದರಿಂದ ಸರಕಾರ ಕೂಡಲೇ ಕಾಮುಕ ಬಷೀರ್ಗೆ ಮರಣದಂಡನೆಗೆ ಗುರಿಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ವೀರಶೈವ ಲಿಂಗಾಯತ ಯುವ ವೇದಿಕೆ ಶಹಾಬಾದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ್ ಗೊಳೇದ್, ಉಪಾಧ್ಯಕ್ಷ ಮಹಾರುದ್ರ ಇಂಗಿನಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಭೀಷೇಕ ಪಾಟೀಲ, ಸದಸ್ಯರಾದ ಸಚಿನ್ ಪಾಟೀಲ,ಜಗದೀಶ ಇಂಗಿನ, ಮಲ್ಲಯ್ಯಸ್ವಾಮಿ, ಶಿವಕುಮಾರ ಅಡಕಿ, ಪ್ರಶಾಂತ ರಾಮಶೆಟ್ಟಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here