ಹಬ್ಬಗಳು, ಉತ್ಸವಗಳು ಬದುಕಿಗೆ ಮಾರಕವಾಗದಿರಲಿ- ಸುರೇಶ ವರ್ಮಾ

0
43

ಶಹಾಬಾದ:ಗಣೇಶ ಹಾಗೂ ಮೋಹರಂ ಹಬ್ಬಗಳನ್ನು ನಾವೆಲ್ಲರೂ ಸಂತೋಷದಿಂದ ಆಚರಿಸಬೇಕೆಂಬುದು ನಿಜ.ಆದರೆ ನಾವು ಆಚರಿಸುವ ಉತ್ಸವಗಳು ಬದುಕಿಗೆ ಮಾರಕವಾಗಬಾರದು ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದರು.

ಅವರು ಬುಧವಾರ ನಗರದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗಣೇಶ ಚತುರ್ಥಿ ಹಾಗೂ ಮೋಹರಂ ಹಬ್ಬದ ನಿಮಿತ್ತ ಆಯೋಜಿಸಲಾದ ಶಾಂತಿಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ರಾಜ್ಯ ಸರಕಾರದ ಪರಿಷ್ಕೃತ ಆದೇಶದ ಮೇರೆಗೆ ಸಾರ್ವಜನಿಕ ಮತ್ತು ಸರಕಾರಿ ಸ್ಥಳದಲ್ಲಿ ಗಣೇಶ ಮೂರ್ತಿಗಳನ್ನು ಕೂಡಿಸಲು ಅವಕಾಶ ಕಲ್ಪಿಸಿದ್ದು, ಸಾರ್ವಜನಿಕರು ವಾರ್ಡಗೆ ಒಂದರಂತೆ ಮೂರ್ತಿಗಳನ್ನು ಕೂಡಿಸಬೇಕು. ಈ ಬಾರಿ ಗಣೇಶ ಹಬ್ಬದಲ್ಲಿ 4ಅಡಿಗಿಂತ ಎತ್ತರದ ಮೂರ್ತಿಗಳನ್ನು ಕೂಡಿಸುವುದಕ್ಕೆ ಅವಕಾಶವಿಲ್ಲ.ಅಲ್ಲದೇ ಸಾಂಸ್ಕೃತಿ ಕಾರ್ಯಕ್ರಮ ಹಾಗೂ ಮೆರವಣಿಗೆ ಮಾಡುವಂತಿಲ್ಲ. ಐದು ದಿನಗಳಿಗೆ ಮಾತ್ರ ಕೂಡಿಸಲು ಅವಕಾಶ ನೀಡಲಾಗಿದೆ. ಸಂಜೆ ಐದರೊಳಗಾಗಿ ಮೂರ್ತಿಗಳನ್ನು ಕಡ್ಡಾಯವಾಗಿ ವಿಸರ್ಜನೆ ಮಾಡಬೇಕೆಂದು ಹೇಳಿದರಲ್ಲದೇ, ಮೋಹರಂ ಹಬ್ಬದ ಸಂದರ್ಭದಲ್ಲಿ ಜನರನ್ನು ಸೇರದಂತೆ ನೋಡಿಕೊಂಡು ದಫನ್ ಕಾರ್ಯವನ್ನು ಆದಷ್ಟು ಬೇಗನೆ ಮುಗಿಸಬೇಕೆಂದು ಹೇಳಿದರು.

ಪೌರಾಯುಕ್ತ ಕೆ.ಗುರಲಿಂಗಪ್ಪ ಮಾತನಾಡಿ, ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಕೊರೊನಾದಿಂದ ನಗರಸಭೆ ಸದಸ್ಯರೊಬ್ಬರು ಮರಣ ಹೊಂದಿದ್ದಾರೆ. ಕೊರೊನಾ ಮಹಾಮಾರಿಯ ಗಂಭೀರತೆಯನ್ನು ಅರಿತುಕೊಂಡು ಗಣೇಶ ಹಾಗೂ ಮೋಹರಂ ಹಬ್ಬವನ್ನು ಆದಷ್ಟು ಸರಳವಾಗಿ ಆಚರಿಸಿ. ಯಾವುದೇ ಕಾರಣಕ್ಕೂ ಸರಕಾರದ ಆದೇಶವನ್ನು ಉಲ್ಲಂಗಿಸಬಾರದು ಎಂದು ಹೇಳಿದರು.
ಒಂದು ವೇಳೆ ಉಲ್ಲಂಘಿಸಿದರೇ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.

ಪಿಐ ಅಮರೇಶ.ಬಿ ಮಾತನಾಡಿ, ಹಬ್ಬ ಹರಿದಿನಗಳು ಭಕ್ತಿಯ ಸಂಕೇತವಾಗಿದ್ದು, ಅವುಗಳನ್ನು ಸಂತೋಷದಿಂದ ಆಚರಿಸಬೇಕು.ಆದರೆ ಪರಿಸ್ಥಿತಿಯನ್ನು ಅರಿತು ಸರಳವಾಗಿ ಆಚರಿಸಿ.ಕಾನೂನಿನ ನಿಯಮಾವಳಿಯನ್ನು ಪಾಲಿಸಿ. ಯಾವುದೇ ಕಾರಣಕ್ಕೂ ಸರಕಾರದ ಆದೇಶವನ್ನು ಉಲ್ಲಂಘಿಸಬಾರದು.ಒಂದು ವೇಳೆ ಉಲ್ಲಂಘಿಸಿದರೇ ಮುಲಾಜಿಲ್ಲದೇ  ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಪಂ ಇಓ ಲಕ್ಷ್ಮಣ ಶೃಂಗೇರಿ,ಪಿಎಸ್ಐ ತಿರುಮಲೇಶ ವೇದಿಕೆಯ ಮೇಲಿದ್ದರು.ನಗರದ ಗಣ್ಯರಾದ ಅರುಣ ಪಟ್ಟಣಕರ್, ಡಾ.ರಶೀದ ಮರ್ಚಂಟ್, ಸಾಹೇಬಗೌಡ ಬೋಗುಂಡಿ,ರಾಜಮಹ್ಮದ್ ರಾಜಾ, ಲೋಹಿತ್ ಕಟ್ಟಿ, ಬಸವರಾಜ ಮದ್ರಿಕಿ, ನಾಗಣ್ಣ ರಾಂಪೂರೆ, ಸದಾನಂದ ಕುಂಬಾರ,ಇನಾಯತಖಾನ ಜಮಾದಾರ,ಅನ್ವರ ಪಾಶಾ, ಬಸವರಾಜ ಬಿರಾದಾರ,ನಾಮದೇವ ಸಿಪ್ಪಿ, ಸೋಮು ನರಿಬೋಳ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here