ಕೊರೊನಾ ಕುರಿತಾದ ಮಾಹಿತಿಯನ್ನು ತಕ್ಷಣದಲ್ಲಿಯೆ ಯಾಪ್‌ಗೆ ತುಂಬಿರಿ: ಡಾ.ಆರ್.ವಿ.ನಾಯಕ

0
96

ಸುರಪುರ: ಇಂದು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಿದ್ದು ಕೊರೊನಾ ನಿರ್ಮೂಲನೆಗಾಗಿ ಸರಕಾರ ಅನೇಕ ಯೊಜನೆಗಳನ್ನು ಜಾರಿಗೊಳಿಸಿದೆ.ಅದರ ಭಾಗವಾಗಿ ಈಗ ಮೂರು ಯಾಪ್‌ಗಳು ಹೊರತರಲಾಗಿದ್ದು ಕೊರೊನಾ ಸೊಂಕಿತರ ಕುರಿತು ಮಾಹಿತಿಯನ್ನು ತತಕ್ಷಣದಲ್ಲಿ ಸರಕಾರಕ್ಕೆ ದೊರೆಯಲು ಯಾಪ್ ಸಹಾಯ ಮಾಡಲಿವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ .ನಾಯಕ ತಿಳಿಸಿದರು.

ನಗರದ ತಹಸೀಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಎಲ್‌ಒಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಪ್ರತಿ ಗ್ರಾಮಗಳಲ್ಲಿನ ಜನರ ಕೋವಿಡ್ ಪರೀಕ್ಷೆಯನ್ನು ತ್ವರಿತಗತಿಯಲ್ಲಿ ಮಾಡುವ ಉದ್ದೇಶದಿಂದ ಕಾಂಟ್ಯಾಕ್ಟ್ ಟ್ರೇಸಿಂಗ್ ಯಾಪ್ ಮತ್ತು ಕ್ವಾರಂಟೈನ್ ವಾಚ್ ಯಾಪ್ ಹಾಗು ಕಾಂಟೋನ್ಮೆಂಟ್ ಜೋನ್ ಯಾಪ್ ಹೊರತರಲಾಗಿದೆ.ಇಂದು ಬಿಎಲ್‌ಗಳಿಗಾಗಿರುವ ಕಾಂಟ್ಯಾಕ್ಟ್ ಟ್ರೇಸಿಂಗ್ ಯಾಪ್ ಕುರಿತು ಮಾಹಿತಿ ನೀಡಲಾಗುತ್ತಿದ್ದು.ನಿಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆವ ಕೋವಿಡ್ ಪರೀಕ್ಷೆಯಲ್ಲಿನ ಪಾಸಿಟಿವ್ ಪ್ರಕರಣಗಳು ಮತ್ತು ಪಾಸಿಟಿವ್ ಹೊಂದಿರುವವರೊಂದಿಗಿನ ಪ್ರಾಥಮಿಕ ಸಂಪರ್ಕಿತರು ಹಾಗು ದ್ವೀತಿಯ ಸಂಪರ್ಕಿತರ ಮಾಹಿತಿಯನ್ನು ತಕ್ಷಣವೆ ಈ ಯಾಪ್‌ಲ್ಲಿ ಅಳವಡಿಸುವಂತೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ ಮಾತನಾಡಿ,ಇಂದು ಕೊರೊನಾ ನಿರ್ಮೂಲನೆಯಲ್ಲಿ ಬಿಎಲ್‌ಒಗಳ ಪಾತ್ರವು ಮುಖ್ಯವಾಗಿದ್ದು ತಾವೆಲ್ಲರು ಈ ಯಾಪ್‌ಗಳನ್ನು ಮೊಬೈಲಲ್ಲಿ ಹಾಕಿಕೊಂಡು ವಹಿಸಿರುವ ಜವಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ಮೂಲಕ ಕೊರೊನಾ ನಿರ್ಮೂಲನೆಗೆ ಕೆಲಸ ಮಾಡುವಂತೆ ತಿಳಿಸಿದರು.

ನಂತರ ಯಾಪ್ ಕುರಿತಾದ ಮಾಹಿತಿಯನ್ನು ಪರದೆಯ ಮೇಲೆ ಛಾಯಾಚಿತ್ರದೊಂದಿಗೆ ವಿವರಿಸಲಾಯಿತು.ಸಭೆಯಲ್ಲಿ ಕಂದಾಯ ಅಧಿಕಾರಿಗಳಾದ ಗುರುಬಸಪ್ಪ ವಿಠ್ಠಲ್ ಬಂದಾಳ ಕೆಂಭಾವಿ ಕಂದಾಯ ಅಧಿಕಾರಿ ರಾಜಾಸಾಬ್ ಸೇರಿದಂತೆ ಎಲ್ಲಾ ಬಿಎಲ್‌ಒಗಳಿದ್ದರು.ಭೀಮು ಯಾದವ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here