ಕೊರೊನಾ ಕಾರಣದಿಂದ ಸುರಪುರದ ಶ್ರೀವೇಣುಗೋಪಾಲ ಸ್ವಾಮಿ ಜಾತ್ರೆ ರದ್ದು

0
187

ಸುರಪುರ: ಕಳೆದ ನೂರಾರು ವರ್ಷಗಳಿಂದ ನಡೆಸಿಕೊಂಡು ಬರಲಾದ ಸಗರ ನಾಡಿನ ಆರಾಧ್ಯ ದೈವ ಶ್ರೀ ವೇಣುಗೋಪಾಲ ಸ್ವಾಮಿ ಜಾತ್ರೆಯನ್ನು ಈ ವರ್ಷ ಕೊರೊನಾ ಹಾವಳಿಯಿಂದಾಗಿ ರದ್ದುಗೊಳಿಸಲಾಗಿದೆ ಎಂದು ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ತಿಳಿಸಿದರು.

ನಗರದ ದರಬಾರದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,ಪ್ರತಿ ವರ್ಷ ಶ್ರೀ ವೇಣುಗೋಪಾಲಸ್ವಾಮಿ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು,ಆದರೆ ಈ ವರ್ಷ ಜಾತ್ರೆಯನ್ನು ಅದ್ಧೂರಿಯಾಗಿ ಆಅಚರಿಸದೆ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ.ಸೆಪ್ಟಂಬರ್ ೧೦ ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ನಂತರ ೧೧ನೇ ತಾರೀಖು ದೇವರಿಗೆ ವಿಶೇಷ ಪೂಜಾಲಂಕಾರ ಮತ್ತು ೧೨ನೇ ತಾರೀಖು ವಿವಿಧ ಸಾಂಪ್ರದಾಯಿಕ ಸರಳವಾಗಿ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

Contact Your\'s Advertisement; 9902492681

ಪ್ರತಿ ವರ್ಷದಂತೆ ಈ ವರ್ಷ ದೇವರ ಕಂಬಾರೋಹಣವಾಗಲಿ ರಣಗಂಬೋತ್ಸವವಾಗಲಿ ಇರುವುದಿಲ್ಲ ಅದರಂತೆ ಪ್ರತಿ ವರ್ಷ ನಡೆಯುವ ಕುಸ್ತಿ ಮತ್ತಿತರೆ ಕಾರ್ಯಕ್ರಮಗಳು ಇರುವುದಿಲ್ಲ ಭಕ್ತಾದಿಗಳು ಸಹಕರಿಸಬೇಕು ಹಾಗು ಶ್ರೀ ವೇಣುಗೋಪಾಲಸ್ವಾಮಿ ಭಕ್ತಾದಿಗಳು ತಮ್ಮ ಮನೆಗಳಲ್ಲಿಯೆ ಗೋಪಾಳ ಕಾವಲಿ ಸೇರಿಂದತೆ ವಿವಿಧ ಆಚರಣೆಗಳನ್ನು ತಮ್ಮ ಮನೆಗಳಲ್ಲಿಯೆ ಆಚರಿಸುವಂತೆ ಕರೆ ನೀಡಿದರು.

ಅರ್ಚಕರಾದ ವೇದಮೂರ್ತಿ ಆಂಜನೇಯಚಾರ್ಯ, ಪಾಪಣ್ಣ ಆಚಾರ್ಯ, ಪ್ರಾಣೇಶಚಾರ್ಯ ಗುಡಿ,ವಿಷ್ಣು ಪ್ರಕಾಶ ಜೋಶಿ, ಸಂದೀಪ ಜ್ಯೋಶಿ, ಗಣೇಶ ಜಹಾಗೀರದಾರ, ಸುನೀಲ ಸರ್‌ಪಟ್ಟಣಶೆಟ್ಟಿ, ದಿನೇಶ ಮಂತ್ರಿ, ವಾಸುದೇವ ಸರ್ ಹವಲ್ದಾರ್, ಉಸ್ತಾದ ನಿಜ್ಜು ಹುಸೇನ್, ಸೈಯದ್ ಹೈಮದ್‌ಪಾಶಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here