ಕಲಬುರಗಿ: ಒಂದು ಕಡೆ ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ತಲುಪದೆ ಕೊರೋನಾ ಸೋಂಕಿತರು ಹಾಗೂ ಕೊರೊನಾ ಇತರರು ರೋಗಿಗಳು ಸಾವು ನೋವು ಅನುಭವಿಸುತ್ತಾರೆ.
ರೋಗಿಗಳು ಸಂಟಕಪಡುತ್ತಿದ್ದು ಮತ್ತೊಂದು ಕಡೆ ಹತ್ತಾರು ಅಂಬುಲೆನ್ಸ್ ಗಳು ಬಳಕೆಯಾಗದೇ ಹಾಳಾಗುತ್ತಿವೆ. ಇದೇನಾ ಸರಕಾರ ಕೋವಿಡ್ ನಿಯಂತ್ರಿಸುವ ರೀತಿ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ತನ್ನ ಅಟ್ಟಹಾಸ ಮರೆಯುತ್ತಿದೆ. ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಗಳು ಲಭ್ಯವಿಲ್ಲದೇ ಹಾಗೂ ಸೂಕ್ತ ವೈದ್ಯಕೀಯ ನೆರವು ಇಲ್ಲದೇ ನೂರಾರು ಸೋಂಕಿತರು ಪರಿತಪಿಸುತ್ತಿದ್ದಾರೆ ಎಂದರು.
ಇಂತಹ ಸಂದರ್ಭದಲ್ಲಿಯೇ ಡಿಎಚ್ ಓ ಕಚೇರಿ ಆವರಣದಲ್ಲಿ ಸುಮಾರು 20 ಅಂಬುಲೆನ್ಸ್ ಗಳು ಬಳಕೆಯಾಗದೆ ನಿಂತಲ್ಲೆ ಕೊಳೆಯುತ್ತಿವೆ ಎಂದು ವಿಡಿಯೋ ಒಂದು ಶೇರ್ ಮಾಡುವ ಮೂಲಕ ಶಾಸಕರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.