ನವದೆಹಲಿ: ತಾವು ಹಾಕಿದ್ದ ಟ್ವೀಟ್ ಗಳಿಗೆ ಸುಪ್ರೀಂಕೋರ್ಟ್ ಕ್ಷಮೆ ಯಾಚಿಸಲು ವಕೀಲ ಮತ್ರು ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಭೂಷಣ ನಿರಾಕರಿಸಿದ್ದಾರೆ.
ಇದಕ್ಕೆ ಪೂರಕ ಎನ್ನುವಂತೆ ತಮ್ಮ ಹೇಳಿಕೆಯನ್ನು ದಾಖಲಿಸಿರುವ ಅವರು, “ಅಪ್ರಮಾಣಿಕವಾಗಿ ಕ್ಷಮೆ ಯಾಚಿಸಿದರೆ ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿದಂತಾಗುತ್ತದೆ. ನಾನು ಮಾಡಿದ್ದು ರಚನಾತ್ಮಕ ಟೀಕೆ. ನನ್ನ ಅಭಿಪ್ರಾಯವನ್ನು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದೇನೆ. ಸುಪ್ರೀಂಕೋರ್ಟ್ ಅಥವಾ ಯಾವುದೇ ಮುಖ್ಯ ನ್ಯಾಯಮೂರ್ತಿಗಳನ್ನು ದೂಷಿಸಲು ಹೇಳಿರುವುದಿಲ್ಲ” ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಹಾಗೂ ಸಿಜೆಎ ಕಚೇರಿಯ ಘನತೆಗೆ ಧಕ್ಕೆ ತರುವಂತಹ ಟ್ವೀಟ್ ಮಾಡಿದ್ದ ಪ್ರಕರಣದಲ್ಲಿ ಪ್ರಶಾಂತ ಭೂಷಣ ತಪ್ಪಿತಸ್ಥರು ಎಂದು ಆಗಸ್ಟ್ ೧೪ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ ೨೪ರೊಳಗೆ ಭೇಷರತ್ ಕ್ಷಮೆ ಕೇಳಬೇಕು ಎಂದು ಸೂಚಿಸಿತ್ತು.