ಶಹಾಬಾದ:ನಗರದ ಭಾರತ ಚೌಕನಲ್ಲಿರುವ ಎಸ್ಬಿಐ ಬ್ಯಾಂಕಿನ ಎಟಿಎಂನಲ್ಲಿರುವ ಹಣವನ್ನು ಕದಿಯಲು ಕಳ್ಳರು ವಿಫಲ ಯತ್ನ ನಡೆದಂತ ಘಟನೆ ಸೋಮವಾರ ರಾತ್ರಿ ನಡೆದಿದೆ.
ಭಾರತ ವೃತ್ತದಲ್ಲಿರುವ ಎಸಬಿಐ ಬ್ಯಾಂಕಿಗೆ ಸೇರಿದ ಎಟಿಎಂನಲ್ಲಿ ಸೋಮವಾರ ರಾತ್ರಿ ದೋಚಲು ಕಳ್ಳು ಯತ್ನಿಸಿದ್ದಾರೆ.ಎಂಟಿಎಂ ಮಷಿನ್ ಮುಂಭಾಗದ ಭಾಗವನ್ನು ಜಖಂಗೊಳಿಸಿ ಕಳ್ಳತನ ಮಾಡಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದಾರೆ.ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಲು ತನಿಖೆ ನಡೆಯುತ್ತಿದೆ ಎಂದು ಪಿಐ ಅಮರೇಶ.ಬಿ ತಿಳಿಸಿದ್ದಾರೆ.