ಕಲಬುರಗಿ: ಜಿಲ್ಲಾ ವೀರಶೈವ ಸಮಾಜ ಟ್ರಸ್ಟ್ ಸಂಚಾಲಿತ, ಕಲಬುರಗಿಯ ರಿಂಗ ರಸ್ತೆಯ ಜಾಗೃತಿ ಕಾಲೋನಿಯಲ್ಲಿರುವ ಮಾತೋಶ್ರೀ ಶಿವಲಿಂಗಮ್ಮ ಶಿವಲಿಂಗಪ್ಪ ಬಿಲಗುಂದಿ ಪ್ರಸಾದ ನಿಲಯದಲ್ಲಿ ವೀರಶೈವ ಸಮಾಜದ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಲು ಅರ್ಜಿ ಅಹ್ವಾನಿಸಲಾಗಿದೆ.
ಪ್ರಸಾದ ನಿಲಯದಲ್ಲಿ ಪ್ರವೇಶ ಪಡೆಯಲು ಬಡತನ ಕುಟುಂಬದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸಾದ ವೀರಶೈವ ಸಮಾಜದ ವಿದ್ಯಾರ್ಥಿಗಳಿಗಾಗಿ ದಿನಾಂಕ 09-06-2019 ರ ರವಿವಾರದಂದು ಮುಂಜಾನೆ 9-30 ಗಂಟೆಗೆ ಸಂದರ್ಶನಕ್ಕಾಗಿ ಅರ್ಜಿಗಳನ್ನು ಕರೆಯಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೦% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಎಸ್‌ಎಸ್‌ಎಲ್‌ಸಿ ನಂತರ ಯಾವುದೇ ಪರೀಕ್ಷೆಯಲ್ಲಿ ಶೇ.. 60% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಸಂದರ್ಶನ ಸಮಯದಲ್ಲಿ ಅಂಕಪಟ್ಟಿ, ಆದಾಯ ಮತ್ತು ಜಾತಿ ಪಮಾಣ ಪತ್ರ, ತಾಲ್ಲೂಕಿನ ವೀರಶೈವ ಸಮಾಜದ ಅಧ್ಯಕ್ಷರ ಅಥವಾ ಕಾರ್ಯದರ್ಶಿಗಳ ಶಿಫಾರಸ್ಸು ಪತ್ರ, ೪ ಭಾವ ಚಿತ್ರಗಳು, ರೇಶನ್ ಕಾರ್ಡ, ಆಧಾರ ಕಾರ್ಡ ಕಾಲೇಜಿನಲ್ಲಿ ಪ್ರವೇಶ ಪಡೆದ ರಸೀದಿಯ ಪ್ರತಿ ಹಾಜರು ಪಡಿಸಬೇಕು ಹೆಚ್ಚಿನ ಮಾಹಿತಿಗಾಗಿ ಹಾಸ್ಟೆಲ್ ವಾರ್ಡನ್ ಬಸವರಾಜ ದುಕಾಂದಾರ್ 9845410971 ಸದಸ್ಯ ಶಿವರಾಜ ಅಂಡಗಿ 9986420656 ಸಂಪರ್ಕಿಸಬೇಕು ಎಂದು ಅಧ್ಯಕ್ಷರಾದ ಬಸವರಾಜ ದೇಶಮುಖ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.