ಕಲಬುರಗಿ: ಇಲ್ಲಿನ ಚಿಂಚೋಳಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಕಬ್ಬಿನ ಹೊಲದಲ್ಲಿ ಗಂಜಾ ಸಸ್ಯಗಳನ್ನು ಬೆಳೆಯುತ್ತಿದ್ದ ಘಟನೆ ಕೊಂಚಾವರಂ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ನಡೆದಿದೆ.
ಸಂಗಾಪುರ ಗ್ರಾಮದ ಚಂದರ್ ಅಮರನಾಯಕ ರಾಥೋಡ್ (50 ) ಆರೋಪಿ ಎಂದು ಗುರುತಿಸಲಾಗಿದ್ದು, ಕಬ್ಬಿನ ನಡುವೆ ಸುಮಾರು ಗಾಂಜಾ ಸಸಿಗಳು ಬೆಳೆಯುತ್ತಿದ್ದ ಎಂಬ ಅಂಶ ಪೊಲೀಸರ ದಾಳಿಯಿಂದ ಬೆಳಕಿಗೆ ಬಂದಿದೆ.
ಧಾಳಿಯಲ್ಲಿ 88 ಕೆಜಿ ಬೆಳೆದ ಗಾಂಜಾ ಸಸ್ಯಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 3.5 ಲಕ್ಷ ರೂ ಎಂದು ಅಂದಾಜಿಸಲಾಗಿದೆ.
ಡಿವೈಎಸ್ಪಿ ವೀರಭದ್ರಯ್ಯ ಮತ್ತು ಚಿಂಚೋಳಿ ಸಿಪಿಐ ಮಹಾಂತೇಶ ಪಾಟೀಲ ಮತ್ತು ಮಿರಿಯಾಣ, ಸುಲೇಪೇಟೆ, ಕೊಂಚಾವರಂ ಠಾಣೆಗಳ ಪಿಎಸ್ಐ ಗಳು ಮತ್ತು ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದರು.
ಕೊಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.