ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದವರಿಗೆ ಕನ್ನಡ ಜಾಣ ಪ್ರಶಸ್ತಿ:ಪ್ರಕಾಶ ಅಂಗಡಿ

0
66

ಸುರಪುರ: ಈ ವರ್ಷದ ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಯಾದಗಿರಿ ಜಿಲ್ಲೆಯ ೧೨೦ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕ್ರಮವಾಗಿ ಜಿಲ್ಲೆಯ ಸುರಪುರ, ಶಹಾಪೂರ, ಯಾದಗಿರಿಯಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ಕಾರ್ಯಕ್ರಮ ಆಯೋಜಿಸಿ ಸಗರನಾಡು ಕನ್ನಡ ಜಾಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

10 ರಂದು ಶಹಾಪೂರ ತಾಲೂಕ ಕೇಂದ್ರದ ಎಕ್ಸ್‌ಲೆಂಟ್ ಕಂಪ್ಯೂಟರ್ ಇನ್ಸ್‌ಟ್ಯೂಟ್‌ನಲ್ಲಿ ಆಯೋಜಿಸಿರುವ ಸಮಾರಂಭವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ಡಾ. ಶೇಖರಗೌಡ ಮಾಲಿಪಾಟೀಲ್ ಕೊಪ್ಪಳ ಉದ್ಘಾಟಿಸುವರು, ವಿದ್ಯಾರ್ಥಿಗಳಿಗೆ ಕ.ರ.ವೇ ಅಧ್ಯಕ್ಷರಾದ ಶರಣು ಬಿ ಗದ್ದುಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದು, ಹಿರಿಯ ಸಾಹಿತಿ ಸಿದ್ದರಾಮ ಹೊನಕಲ್ ಅಧ್ಯಕ್ಷತೆ ವಹಿಸುವರು, ಅತಿಥಿಗಳಾಗಿ ಕಂಪ್ಯೂಟರ್ ಇನ್ಸ್‌ಟ್ಯೂಟ್‌ನ ಲಿಂಗಣಗೌಡ ಪಾಟೀಲ್, ಪ್ರಕಾಶ ಹದನೂರು, ಮಲ್ಲಣ್ಣಗೌಡ ಪಾಟೀಲ್ ಅತಿಥಿಗಳಾಗಿ ಪಾಲ್ಗೊಳ್ಳುವರು.

Contact Your\'s Advertisement; 9902492681

11ರಂದು ಶುಕ್ರವಾರ ಯಾದಗಿರಿ ನಗರದ ಲಿಂಗೇರಿ ಕೊನಪ್ಪ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಕ.ಸಾ.ಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಉದ್ಘಾಟಿಸುವರು. ಯಾದಗಿರಿ ಜಿಲ್ಲಾ ಖಾಸಗಿ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಶೇಖರರ‍್ಯಾಖ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದು, ಶ್ರೀ.ಚಂದ್ರಶೇಖರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ. ಸಿದ್ರಾಮಪ್ಪಗೌಡ ಪಾಟೀಲ್ ಚೇಗುಂಟ ಅಧ್ಯಕ್ಷತೆ ವಹಿಸುವರು, ಅತಿಥಿಗಳಾಗಿ ಯಾದಗಿರಿ ತಾಲೂಕ ಕ.ಸಾ.ಪ ಅಧ್ಯಕ್ಷ ಡಾ. ಭೀಮರಾಯ ಲಿಂಗೇರಿ ಪಾಲ್ಗೊಳ್ಳುವರು.

12ರಂದು ಶನಿವಾರ ಸುರಪುರ ತಾಲೂಕಿನ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಸಾನಿದ್ಯವನ್ನು ಲಕ್ಷ್ಮೀಪೂರದ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಸಾನಿದ್ಯವಹಿಸಲಿದ್ದು, ರಂಗಂಪೇಟ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುರೇಶ ಆರ್ ಸಜ್ಜನ್ ಉದ್ಘಾಟಿಸುವರು, ವಿದ್ಯಾರ್ಥಿಗಳಿಗೆ ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹಾದೇವ ರೆಡ್ಡಿ ಪ್ರಶಸ್ತಿ ಪ್ರಧಾನ ಮಾಡಲಿದ್ದು, ಅಧ್ಯಕ್ಷತೆಯನ್ನು ತಾಲೂಕ ಕ.ಸಾ.ಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ವಹಿಸುವರು ಎಂದು ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here