ಸುರಪುರ: ತಾಲೂಕು ಆಡಳಿತ, ತಾಲೂಕ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸುರಪುರ ಇವರ ಸಂಯುಕ್ತಾಶ್ರಯದಲ್ಲಿ ಪೋಷಣೆ ಅಭಿಯಾನ ಮಾಸಚರಣೆ ಸೆಪ್ಟೆಂಬರ್-೨೦೨೦ ಹಸನಾಪುರ ವಲಯ ಮಟ್ಟದ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸಿ.ಡಿ.ಪಿ.ಓ ಕಛೇರಿ ಆವರಣದಲ್ಲಿ ಬುಧವಾರ ಪೋಷಣ ಅಭಿಯಾನ ಭಿತ್ತಿ ಪತ್ರಗಳನ್ನು ಸಿ.ಡಿ.ಪಿ.ಓ ಲಾಲಸಾಬ ಪೀರಾಪುರ ಬಿಡುಗಡೆ ಮಾಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ೫ ವರ್ಷಗಳಲ್ಲಿನ ತೀವೃ ಅಪೌಷ್ಠಿಕ ಮಕ್ಕಳನ್ನು ಗುರುತಿಸುವುದು ಉನ್ನತ ಚಿಕಿತ್ಸೆಗೆ ಎನ್.ಆರ್.ಸಿ ಕೇಂದ್ರಗಳಿಗೆ ಕಳಿಸಿಕೊಡುವ ಮೂಲಕ ಮಕ್ಕಳು ಗಂಭೀರ ಸ್ಥಿತಿಗೆ ತಲುಪುವುದನ್ನು ಕಡಿಮೆಗೊಳಿಸಬಹುದಾಗಿದೆ. ಆದ್ದಾರಿಂದ ತೀವೃ ಅಪೌಷ್ಠಿಕ ಮಕ್ಕಳನ್ನು ಗುರುತಿಸುವುದು, ಶಿಫಾರಸ್ಸು, ಸೇವೆಗಳನ್ನು ನೀಡುವುದು ಜೊತೆಗೆ ಪ್ರತಿ ವರ್ಷದಂತೆ ಸೆಪ್ಟೆಂಬರ್-೨೦೨೦ ತಿಂಗಳನ್ನು ರಾಷ್ಟ್ರೀಯ ಪೋಷಣ ಮಾಸವನ್ನು ಆಚರಿಸಲಾಗುತ್ತಿದ್ದು.
ಈ ವರ್ಷ ಕೊವೀಡ್-೧೯ ಸಂದರ್ಭದಲ್ಲಿ ಡಿಜಿಟಲ್ ವಿಧಾನದ ಮೂಲಕ ಅರಿವು ಮೂಡಿಸುವುದು ಪ್ರಮುಖ ಉದ್ದೇಶ ಎಂದರು. ನಮ್ಮ ಅಂಗನವಾಡಿ ಕಾರ್ಯಕರ್ತೆಯರು ನಿಗದಿತ ವೇಳಾಪಟ್ಟಿಯಂತೆ ಪ್ರತಿ ಅಂಗನವಾಡಿಯಲ್ಲಿ ಕಾರ್ಯಕ್ರಮವನ್ನು ಇತರೆ ಇಲಾಖೆ ಸಂಯೋಗದೊಂದಿಗೆ ಗ್ರಾಮ ಪಂಚಾಯತ ಮಟ್ಟದಲ್ಲಿ ಆಚರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ಜಯಶ್ರೀ ಎಸ್. ಬಿರದಾರ, ತಾಲೂಕ ಸಂಯೋಜಕ ಕರ್ಣ ದೇವಾಪುರ, ಕರುಣಾ ಕುಲಕರ್ಣಿ, ಆರೋಗ್ಯ ಇಲಾಖೆ, ಸವಿತಾ ಶಾಲಾ ಪೂರ್ವ ಶಿಕ್ಷಣ, ಅಂಗನವಾಡಿ ಕಾರ್ತಕರ್ತೆಯರು ಭಾಗವಹಿಸಿದ್ದರು. ಮಾಲಾಶ್ರೀ ಬಿಲ್ಲವ್ ಸ್ವಾಗತಿಸಿದರು, ಮಹಾಲಕ್ಷ್ಮೀ ಪಾಟೀಲ್ ನಿರೂಪಿಸಿದರು,ತಿಪ್ಪಮ್ಮ ಸತ್ಯಂಪೇಟ ವಂದಿಸಿದರು.