ಶಹಾಬಾದ:ತಾಲೂಕಿನಲ್ಲಿ ಈಗಾಗಲೇ 260 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಮತ್ತು 11 ಪಾಸಿಟಿವ್ ಪ್ರಕರಣಗಳು ಮರಣ ಹೊಂದಿದ ಪ್ರಯುಕ್ತ ನಗರದ ಅಂಗಡಿ ಮಾಲೀಕರು ಹಾಗೂ ದೈನಂದಿನ ಗ್ರಾಹಕರು ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳತಕ್ಕದ್ದು ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.
ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ರೋಗ ಸಮುದಾಯದ ಹಂತದಲ್ಲಿ ಹರಡದಂತೆ ಮುಂಜಾಗೃತ ಕ್ರಮವಾಗಿ ನಗರದ ಎಲ್ಲಾ ಅಂಗಡಿ ಮಾಲೀಕರು ಹಾಗೂ ದೈನಂದಿನವಾಗಿ ಸಾರ್ವಜನಿಕರ ಜತೆಗೆ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳತಕ್ಕದ್ದು. ಅಲ್ಲದೇ ಅಂಗಡಿಗಳಲ್ಲಿ ಸ್ಯಾನಿಟೈಜರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಕಡ್ಡಾಯವಾಗಿ ಮಾಸ್ಕ ಧರಿಸಿ ರೋಗ ಬಾರದಂತೆ ನೋಡಿಕೊಳ್ಳುವುದರ ಜತೆಗೆ ಕುಟುಂಬದ ರಕ್ಷಣೆ, ಸಮುದಾಯದ ರಕ್ಷಣೆ ಮಾಡುವುದು ತಮ್ಮ ಆದ್ಯ ಕರ್ತವ್ಯ.ಆದ್ದರಿಂದ ತಾಲೂಕಿನ ಸಮಸ್ತ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಸಹಕಾರ ನೀಡಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ಕೋರಿದ್ದಾರೆ.
ಮನೆ ಬಿಸಿ ಬಿಸಿ ಸುದ್ದಿ ಅಂಗಡಿ ಮಾಲೀಕರು, ದೈನಂದಿನವಾಗಿ ವ್ಯವಹರಿಸುವ ಜನರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳತಕ್ಕದ್ದು- ಸುರೇಶ ವರ್ಮಾ