ಹುಬ್ಬಳ್ಳಿ ರೇಲ್ವೆ ನಿಲ್ದಾಣಕ್ಕೆ ಸಿದ್ದಾರೂಢ ಸ್ವಾಮಿಜಿ ಹೆಸರು ನಾಮಕರಣ ಅಂಬಾರಾಯ ಅಷ್ಠಗಿ ಸ್ವಾಗತ

1
95

ಕಲಬುರಗಿ: ಹುಬ್ಬಳ್ಳಿ ಜನರ ಹಾಗೂ ಸಮಸ್ತ ಭಕ್ತವೃಂದದ ಬಹು ದಿನಗಳ ಬೇಡಿಕೆಯಂತೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣಕ್ಕೆ “ಶ್ರೀ ಸಿದ್ಧಾರೂಡ ಸ್ವಾಮಿಜಿ ರೇಲ್ವೆ ನಿಲ್ದಾಣ”ವೆಂದು ನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಶ್ರೀ ಮಠದ ಭಕ್ತವೃಂದ ದಲ್ಲಿ ಅಪಾರ ಹರ್ಷ ಉಂಟು ಮಾಡಿದೆ ಎಂದು ಬಿಜೆಪಿ ಮುಖಂಡ ಹಾಗೂ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ ಹೇಳಿದ್ದಾರೆ.

ಶ್ರೀ ಸಿದ್ದಾರೂಢರು ತಮ್ಮನ್ನು ನಂಬಿದ ಭಕ್ತರಿಗೆ ಸನ್ಮಾರ್ಗವನ್ನು ತೋರಿಸುವುದರ ಜೊತೆಗೆ ಸಮ ಸಮಾಜ ನಿರ್ಮಾಣದ ಕನಸು ನನಸು ಮಾಡುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದರು.ಪೂಜ್ಯ ಸ್ವಾಮಿಜಿಯವರ ತತ್ವಾದರ್ಶಗಳು ಇಂದಿನ ಜನ ಮಾನಸಕ್ಕೆ ಅತ್ಯಂತ ಅವಶ್ಯಕವಾಗಿದವೆ.

Contact Your\'s Advertisement; 9902492681

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ಅಂಬಾರಾಯ ಅಷ್ಠಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here