ಸುರಪುರ: ಡಾ: ಬಿ.ಆರ್.ಅಂಬೇಡ್ಕರ ಅವರ ಜೀವನಾಧಾರಿತ ಧಾರವಾಹಿ ಮಹಾನಾಯಕಕ್ಕೆ ಬೆಂಬಲ ಸೂಚಿಸಿ ನಗರದ ಡಾ:ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಬೃಹತ್ ಬ್ಯಾನರ್ ಹಾಕಿ ಧಾರವಾಹಿಯ ಯಶಸ್ಸಿಗೆ ಬೆಂಬಲ ಸೂಚಿಸಿದರು.
ಈ ಕುರಿತು ಅಂಬೇಡ್ಕರರ ಅನುಯಾಯಿ ಜಗದೀಶ ಶಾಖಾನವರ್ ಮಾತನಾಡಿ,ಡಾ: ಬಾಬಾ ಸಾಹೇಬ್ ಅಂಬೇಡ್ಕರ ಅವರ ಜೀವನ ದೇಶದ ಎಲ್ಲರಿಗೂ ಮಾದರಿಯಾಗಿದೆ.ಪ್ರತಿಯೊಬ್ಬ ಯುವಕನು ಅವರ ಜೀವನದ ವಿಧಾನ ಮಾಡಿದ ಸಾಧನೆಯನ್ನು ನೋಡಿ ಅದನ್ನು ಮೈಗೂಡಿಸಿಕೊಂಡಲ್ಲಿ ದೊಡ್ಡ ವ್ಯಕ್ತಿಯಾಗಲು ಸಾಧ್ಯವಿದೆ.ಮಹಾನಾಯಕದಂತಹ ಒಂದು ಮುಖ್ಯವಾದ ಧಾರಾವಾಹಿಯನ್ನು ನೀಡಿದ ಜೀ ವಾಹಿನಿ ಮತ್ತು ಅದರ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ನಂತರ ಮುಖಂಡ ರಮೇಶ ಬಡಿಗೇರ ಬಾಚಿಮಟ್ಟಿ ಮಾತನಾಡಿ,ಯಾರೋ ಮತಿಯವಾದಿಗಳು ರಾಘವೇಂದ್ರ ಹುಣಸೂರವರಿಗೆ ಬೆದರಿಕೆ ಕರೆ ಮಾಡಿ ಧಾರಾವಾಹಿ ಪ್ರಸಾರ ಮಾಡದಂತೆ ಹೇಳುತ್ತಿದ್ದಾರೆ ಎಂದು ಗೊತ್ತಾಗಿದೆ.ಆದರೆ ರಾಘವೇಂದ್ರ ಹುಣಸೂರವರೊಂದಿಗೆ ಈ ದೇಶದ ಕೋಟ್ಯಾಂತರ ಜನ ಬಾಬಾ ಸಾಹೇಬರ ಅನುಯಾಯಿಗಳಿದ್ದು ಯಾವುದೇ ಬೆದರಿಕೆ ಕರೆಗೆ ಹೆದರಬೇಕಿಲ್ಲ ಎಂದು ಬೆಂಬಲ ಸೂಚಿಸಿದರು. ಇದೇ ಸಂದರ್ಭದಲ್ಲಿ ಬ್ಯಾನರ್ ಅನಾವರಣಗೊಳಿಸಿ ನಂತರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರರ ಅಭಿಮಾನಿಗಳಾದ ಪ್ರೇಮಕುಮಾರ ಜೀವಣಗಿ ನಾಗರಾಜ ಕಟ್ಟಿಮನಿ ರಾಹುಲ್ ತೇಲ್ಕರ್ ರೋಹಿತ್ ಕಾಂಬ್ಳೆ ಗೋಪಾಲಕೃಷ್ಣ ಸುರಪುರಕರ್ ಮರೆಪ್ಪ ತಳವಾರ ಪ್ರಜ್ವಲ್ ಕಟ್ಟಿಮನಿ ಭೀಮು ಪೂಜಾರಿ ಶಿವರಾಜ ಮುಷ್ಠಳ್ಳಿ ಗೋಪಾಲಕೃಷ್ಣ ಹುಲಿಕರ್ ಹಣಮಂತ ಕಟ್ಟಿಮನಿ ಗೋವರ್ಧನ ತೇಲ್ಕರ್ ಶಿವುಕುಮಾರ ಹುಲಿಕರ್ ಹರೀಶ ಶಾಖಾನವರ್ ಅಮೀತ್ ಬೊಮ್ಮನಹಳ್ಳಿ ಆಕಾಶ ಕಟ್ಟಿಮನಿ ಗುರು ಹುಲಿಕರ್ ರಾಮು ತೇಲ್ಕರ್ ಸೇರಿದಂತೆ ಅನೇಕರಿದ್ದರು.