ಸುರಪುರ: ಕಳೆದ ಅನೇಕ ತಿಂಗಳುಗಳಿಂದ ಪ್ರಯಾಣಿಕರಿಗೆ ತಲೆ ಬಿಸಿಯಾಗಿಸಿದ್ದ ಬೀದರ ಬೆಂಗಳೂರು ರಾಜ್ಯ ಹೆದ್ದಾರಿಯ ಕವಡಿಮಟ್ಟಿ ಬಳಿಯಲ್ಲಿ ಬಿದ್ದಿದ್ದ ದೊಡ್ಡ ಗುಂಡಿ ಮುಚ್ಚಿಸಲು ಕೊನೆಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಕ್ರಮಕ್ಕೆ ಮುಂದಾಗಬೇಕಾಯಿತು ಎಂದು ಜನತೆ ಮಾತಾಡಿಕೊಳ್ಳುತ್ತಿದ್ದಾರೆ.
ರಾಜ್ಯ ಹೆದ್ದಾರಿಯಲ್ಲಿ ದೊಡ್ಡದಾದ ತಗ್ಗು ಬಿದ್ದು ನೀರು ನಿಂತಿದ್ದರಿಂದ ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡುವುದು ಎಂದರೆ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.ಅನೇಕರು ಈ ಸ್ಥಳದಲ್ಲಿ ಅಪಘಾತಕ್ಕೀಡಾಗಿ ಕಾಲು ಮುರಿದುಕೊಂಡ ಘಟನೆಗಳು ನಡೆದಿದ್ದವು.ಅಲ್ಲದೆ ಅನೇಕ ವಾಹನಗಳ ತಳ ಭಾಗ ಹಾಳಾಗಿರುವ ಅನೇಕ ಉದಾಹರಣೆಗಳು ಇವೆ.ಇಂತಹ ಅನೇಕ ಘಟನೆಗಳಿಂದ ಬೇಸತ್ತಿದ್ದ ಜನರು ನಿತ್ಯವು ಹಿಡಿ ಶಾಪ ಹಾಕುತ್ತಿದ್ದರು.
ವಾಹನ ಸವಾರರಿಗೆ ಆಗುತ್ತಿರುವ ತೊಂದರೆಯ ಕುರಿತು ಅನೇಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೊಪಯೋಗಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.ಕೊನೆಗೆ ಅನೇಕರು ಹೆದ್ದಾರಿಯಲ್ಲಿನ ಈ ದುಸ್ಥಿತಿಯ ಕುರಿತು ಶಾಸಕರ ಗಮನಕ್ಕೆ ತಂದ ನಂತರ ತಕ್ಷಣ ಕ್ರಮ್ಕಕೆ ಮುಂದಾಗಿರುವ ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿ ನಾಳೆಯೊಳಗೆ ರಸ್ತೆ ದುರಸ್ಥಿ ಮಾಡಿಸುವಂತೆ ಖಡಕ್ ವಾರ್ನಿಂಗ್ ಮಾಡಿದ್ದರಿಂದ ಆಗಿಂದಾಗಲೆ ಅಧಿಕಾರಿಗಳು ರಸ್ತೆ ದುರಸ್ಥಿಗೆ ಮುಂದಾಗಿದ್ದಾರೆ ಎಂದು ಮಾಹಿತಿ ನೀಡುತ್ತಿದ್ದಾರೆ ಹೋರಾಟಗಾರ ತಿಗಳಪ್ಪ ಕವಡಿಮಟ್ಟಿ.
ಕೊನೆಗೆ ಶಾಸಕರ ತಕ್ಷಣದ ಸ್ಪಂಧನೆಯಿಂದ ರಸ್ತೆ ದುರಸ್ಥಿಗೊಳ್ಳುತ್ತಿರುವುದಕ್ಕೆ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವ ಜೊತೆಗೆ ಶಾಸಕರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.