ಪ್ರೊ. ಎಚ್.ಟಿ. ಪೋತೆ ಕೃತಿಗೆ ಎಲ್. ಬಸವರಾಜು ದತ್ತಿ ಪ್ರಶ್ತಸಿ

0
65

ಕಲಬುರಗಿ: ಕನ್ನಡ ದಲಿತ-ಬಂಡಾಯ ಸಾಹಿತ್ಯ ಕ್ಷೇತ್ರದ ಶ್ರೇಷ್ಠ ಕಥೆಗಾರರು, ವಿಮರ್ಶಕರು, ಪ್ರಬಂಧಕಾರರು ಕಾದಂಬರಿಕಾರರ, ಜಾನಪದ ವಿದ್ವಾಂಸರು, ಸಂಶೋಧಕರು ಹಾಗೂ ಅಂಬೇಡ್ಕರ್‌ವಾದಿ ಲೇಖಕರೆಂದು ಹೆಸರಾದ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ, ಕಲಾನಿಕಾಯದ ಡೀನರಾದ ಪ್ರೊ. ಎಚ್.ಟಿ. ಪೋತೆ ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ’ಪುಸ್ತಕ ಪ್ರೀತಿ’ ಕೃತಿಗೆ ಅಮೃತ ಮಹೆತ್ಸವ ಸಾಹಿತ್ಯ ಸಮ್ಮೇಳನ ಸವಿನೆನಪಿನ ಎಲ್. ಬಸವರಾಜು ದತ್ತಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ೫,೦೦೦=೦೦ ರೂಪಾಯಿಗಳ ನಗದು ಬಹುಮಾನ ಹೊಂದಿರುತ್ತದೆ.

ಅಭಿನಂದನೆಗಳು: ಸಮಾಜ ವಿಜ್ಞಾನ ನಿಕಾಯದ ಡಾ. ಜಗನ್ನಾಥ ಸಿಂಧೆ, ರಾಜ ಶಾಸ್ತ್ರ ವಿಭಾಗದ ಡಾ. ಜಿ. ಶ್ರೀರಾಮಲು, ಸಮಾಜಕಾರ್ಯ ಅಧ್ಯಯನ ವಿಭಾಗದ ಡಾ. ಕೆ.ಎಸ್. ಮಾಲಿಪಾಟೀಲ ದೈಹಿಕ ಶಿಕ್ಷಣ ವಿಭಾಗದ ಡಾ. ಎಚ್.ಎಸ್. ಜಂಗೆ, ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕರಾದ ಡಾ. ಎಂ.ಬಿ ಕಟ್ಟಿ, ಡಾ. ಎಚ್.ಬಿ. ಮೇಲ್ಕೇರಿ, ಡಾ. ಸುಜಾತಾ ಜಂಗಮಶೆಟ್ಟಿ, ಡಾ. ವಸಂತ ನಾಸಿ, ಡಾ. ಸಂತೋಷ ಕಂಬಾರ ಮುಂತಾದವರು ಅಭಿನಂದಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here