ಕಲಬುರರ್ಗಿ: ಇದೇ ೨೧ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ಡೆ ತಿದ್ಡುಪಡಿ, ಎಪಿಎಂಸಿ ಕಾಯ್ಡೆ ತಿದ್ಡುಪಡಿ, ಕೈಗಾರಿಕಾ ವ್ಯಾಯಜ್ಯಗಳು ಮತ್ತು ಇತರ ಕಾಯ್ಡೆ ತಿದ್ಡುಪಡಿ ಮಸೂದೆಗಳನ್ನು ಮಂಡಿಸಲು ಮುಂದಾಗಿದೆ. ರೈತ, ಕಾರ್ಮಿಕ ವಿರೋಧಿಯಾದ ಇವುಗಳನ್ನು ಬೆಂಬಲಿಸಬಾರದು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಸಂಘರ್ಪ ಸಮನ್ವಯ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ‍್ಡಿಬಿ) ಕಚೇರಿ ಎದುರು ಪ್ರತಿಭಟನೆ ನಡೆಸಿದ ಮುಖಂಡರು, ಸರ್ಕಾರ ಹೊರಡಿಸಿದ ಈ ಸುಗೀವಾಜ್ಞೇಗಳು ದಲಿತ, ಅಲ್ಪಸಂಖ್ಯಾತ, ಮಹಿಳೆ ಹೀಗೆ ವಿವಿಧ ಸಾಮಾಜಿಕ ಜನ ಸಮೂಹವನ್ನು ಇನ್ನಷ್ಟು ಸಂಕಷ್ಟಕ್ಕೀಡುಮಾಡುತ್ತವೆ ಎಂದರು. ೧೦ ಲಕ್ಷ ಜನರ ಷೇರು ಧನ ಹೊಂದಿರುವ ಕಲಬುರ್ಗಿ- ಯಾದಗಿರಿ ಡಿಸಿಸಿ ಬ್ಯಾಂಕನ್ನು ಪುನಶ್ಚೇತನ ಮಾಡುವ ನಿಟ್ಟಿನಲ್ಲಿ ರೂ.೧೦ ಕೋಟಿ ಬಿಡುಗಡೆ ಮಾಡಬೆಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಮಾರುತಿ ಮಾನಪಡೆ, ಶಾಂತಪ್ಪ ಪಾಟೀಲ್ ಸಣ್ಣೂರ, ಮೌಲಾಮುಲ್ಲಾ, ಭೀಮಾಶಂಕರ ಮಾಡ್ಯಾಳ, ನಾಗಿಂದ್ರಪ್ಪ ಕಣಮನ, ಜಗದೇವಿ ಹೆಗಡೆ, ಪಾಂಡುರಂಗ ಮಾವಿನಕರ, ಸುಧಾಮ ಧನ್ನಿ, ಶಿವಾನಂದ ಕವಲಗಾ ಇದ್ದರು.