ಕಲಬುರಗಿಯಲ್ಲಿ: ಭಾಗ್ಯವಂತಿ ದೇವಿಗೆ 101 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಪೊಲೀಸರು

0
53

ಕಲಬುರಗಿ: ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಸಹಾಯಕರಾದ ತಹಶೀಲ್ದಾರ ಪಂಡಿತ ಬಿರಾದಾರ ಅವರು ಪ್ರವಾಹದಲ್ಲಿ ಸಿಲುಕಿದ್ದ ಕಾರ್ಯಾಚರಣೆ ಯಶಸ್ಸಿಯಾಗಿ ಪ್ರಾಣಾಪಾಯದಿಂದ ಪಾರಾಗಿ ಬಂದ ಹಿನ್ನೆಲೆಯಲ್ಲಿ, ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿಯ ಭಾಗ್ಯವಂತಿ ದೇವಿಗೆ ಮಿರಿಯಾಣ ಠಾಣೆಯ ಸಬ್ ಇನಸ್ಪೆಕ್ಟರ ಸಂತೋಷ ರಾಠೋಡ ಅವರು ಗುರುವಾರ 101 ತೆಂಗಿನ ಕಾಯಿ ಒಡೆದು ಹರಕೆ ಸಲ್ಲಿಸಿದರು.

ಡಿವೈಎಸ್ಪಿ  ಈ.ಎಸ್.ವೀರಭದ್ರಯ್ಯ ನೇತೃತ್ವದಲ್ಲಿ ಸರ್ಕಲ್ ಇನಸ್ಪೆಕ್ಟರ್ ಮಹಾಂತೇಶ ಪಾಟೀಲ ಹಾಗೂ ಚಿಂಚೋಳಿ ಠಾಣೆಯ ಸಬ್ ಇನಸ್ಪೆಕ್ಟರ್ ರಾಜಶೇಖರ ರಾಠೋಡ ಅವರು ಭಾಗ್ಯವಂತಿ ದೇವಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿ ಹೂಕಾಯಿ ಅರ್ಪಿಸಿದರು. ನಂತರ ಸಾಮೂಹಿಕವಾಗಿ 101  ತೆಂಗಿನಕಾಯಿ ಒಡೆದರು.

Contact Your\'s Advertisement; 9902492681

ಅಮವಾಸ್ಯೆ ವಿಶೇಷ ಪೂಜೆಯಲ್ಲಿಯೂ ಪೊಲೀಸರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಂಜುನಾಥ ಚೆಟ್ಟಿ, ಅಪ್ಪು, ಜಡೆಪ್ಪ, ಈಶ್ವರ, ಗಫಾರಸಾಬ, ಶಿವರಾಯ ಪಾಟೀಲ, ಲಕ್ಷ್ಮಣ, ಮೊಹಮದ್ ಮುಸ್ತಫಾ ಇತರರು ಇದ್ದರು.‌

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here