ಕಲಬುರಗಿ: ವಿದ್ಯಾರ್ಥಿ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಉಮಾರ್ ಖಲಿದ್ ರವರ ಬಂಧನ ಖಂಡಿಸಿ CAA ವಿರುದ್ಧ ಪ್ರತಿಭಟಿಸುವುದು ಜನರ ಮತ್ತು ವಿದ್ಯಾರ್ಥಿ ಕಾರ್ಯಕರ್ತರ ಪ್ರಜಾಪ್ರಭುತ್ವದ ಹಕ್ಕು ಉಮಾರ್ ಖಲಿದ್ ಸೇರಿದಂತೆ ಎಲ್ಲಾ ಅಮಾಯಕ ಕಾರ್ಯಕರ್ತರನ್ನು ಬೇಷರತ್ತ ನಷ್ಟ ಪರಿಹಾರದೊಂದಿಗೆ ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಇಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ನೇತೃತ್ವದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಪಕ್ಷದ ಮುಖಂಡರಾದ ಸಲೀಮ್ ಚಿತಾಪುರಿ ಮಾತನಾಡಿ, ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆಂಬ ಆರೋಪದ ಮೇರೆಗೆ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಅವರ ವ್ಯಕ್ತಿತ್ವ ತೇಜೋವಧೆಗೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರಕಾರ ದ್ವೇಷಭಾಷಣಗಳನ್ನು ಮಾಡಿ ಹಿಂಸಾಚಾರವನ್ನು ಪ್ರಚೋದಿಸಿದ ಉನ್ನತ ಬಿಜೆಪಿ ಮುಖಂಡರನ್ನು ರಕ್ಷಿಸುತ್ತಿದ್ದರೆ, ಸಿಎಎ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಯುವಜನಗಳ ಮೇಲೆ ಗುರಿಯಿಡಲಾಗುತ್ತಿದೆ, ಸಿಎಎ-ವಿರೋಧಿ ಪ್ರತಿಭಟನೆಗಳು ಮತ್ತು ಕೋಮು ಹಿಂಸಾಚಾರವನ್ನು ತಳಕು ಹಾಕುವ ದೇಶದ ಗೃಹ ಮಂತ್ರಾಲಯ ಮತ್ತು ದಿಲ್ಲಿ ಪೋಲೀಸ್ ನ ಅತ್ಯಂತ ಕಪೋಲಕಲ್ಪಿತ ಆವೃತ್ತಿಯನ್ನು ತೋರಿಸಿ ಬಂಧಿಸಲಾಗುತ್ತಿದೆ ಎಂದರು.
ಕೂಡಲೇ ಶಾಂತಿಯುತ ರಾಜಕೀಯ ಪ್ರತಿಭಟನೆಗಳನ್ನು ಕ್ರಿಮಿನಲ್ ಅಪರಾಧ ಎಂದು ಬಿಂಬಿಸುವ ಸಂವಿಧಾನ ವಿರೋಧಿ ನಿಲುವು ಕೂಡಲೇ ನಿಲ್ಲಿಸಿ, ಸುಳ್ಳು ಮೊಕದ್ದಮೆಗಳನ್ನು ಹೂಡಿ ಜೈಲಿಗೆ ಕಳುಹಿಸಲಾಗಿರುವ ಎಲ್ಲಾ ರಾಜಕೀಯ ಖೈದಿಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ತಾಮಿರೆ ಮಿಲ್ಲತ್, ಮುಸ್ಲಿಂ ಲೀಗ್, ನಯ ಸವೇರಾ ಸಂಘಟನೆ ಹಾಗೂ ಎಸ್.ಡಿ.ಪಿ.ಐ ಪಕ್ಷದ ಸಹಯೋಗದಲ್ಲಿ ಪ್ರತಿಭಟನೆ ಜರುಗಿತು. ಮೋದಿನ್ ಪಟೇಲ್ ಅಣಬಿ, ಮುಬೀನ್ ಅಹ್ಮದ್, ಸಲೀಂ ಸಗ್ರಿ , ಮುನ್ನಿರ್ ಹಾಸ್ಮಿ ಅಬ್ದುಲ್ ಅಜೀಜ್ ಪಟೇಲ್ ಸೇರಿದಂತೆ ಇತರರಿದ್ದರು ಪ್ರತಿಭಟನೆಯಲ್ಲಿ ಇದ್ದರು.