ಅಗಲಿದ ‘ದಾದಾ’ಗೆ ನಾಲ್ಕು ಸಾಲುಗಳ ನುಡಿ ನಮನ :

0
88

ಇಂದು ನಮ್ಮನ್ನಗಲಿದ 85 ವರ್ಷದ ಹಿರಿಯ ಜೀವದ ಹೆಸರು ರಘುನಾಥರಾವ್ ತಿಳಗೂಳ. ಶಹಾಪುರ ನಗರ ಮತ್ತು ತಾಲ್ಲೂಕಿನ ಪ್ರತಿ ಗ್ರಾಮದಲ್ಲಿ ಓದುಗರನ್ನು ಸೃಷ್ಟಿಸಿದ ಇವರ ಋಣ ಯಾರಿಂದಲೂ ತೀರಿಸಲು ಸಾಧ್ಯವಿಲ್ಲ.

ಸುಮಾರು 40-45 ವರ್ಷಗಳ ಕಾಲ ಇವರ ಪತ್ರಿಕೆ ವಿತರಣಾ ಸೇವೆ ಅನನ್ಯವಾದುದು.
ತಮ್ಮ ಇಡೀ ಜೀವಿತಾವಧಿಯಲ್ಲಿ ವಿಶ್ರಾಂತಿ ಪಡೆಯದೇ ಓದುಗರಿಗೆ ಬೇಕಾಗುವ ಪತ್ರಿಕೆ ಅಥವಾ ಪುಸ್ತಕಗಳನ್ನು ಒದಗಿಸುವ ಮೂಲಕ ಓದುಗರ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಇವರನ್ನು ಯಾರೂ ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ.

Contact Your\'s Advertisement; 9902492681

ಇವರಲ್ಲಿದ್ದ ವ್ಯವಹಾರ ಸಿದ್ಧಾಂತ ನನಗೆ ತುಂಬ ಇಷ್ಟವಾಗಿತ್ತು. ಅವರು ಪ್ರತಿದಿನ ‘ದಿ ಹಿಂದು’ ಪತ್ರಿಕೆಯನ್ನು ತಪ್ಪದೇ ಓದುತ್ತಿದ್ದರು. ದಿ ಹಿಂದು ಪತ್ರಿಕೆ ಎಂದರೆ ಅವರಿಗೆ ಪಂಚಪ್ರಾಣವಾಗಿತ್ತು. ಅವರದೇ ಪತ್ರಿಕೆಯ ಅಂಗಡಿ ಇದ್ದರೂ ಒಂದು ದಿನವೂ ಅಂಗಡಿಯಲ್ಲಿ ಪತ್ರಿಕೆ ತೆಗೆದು ಓದಿ, ಮತ್ತೆ ಮಾರಾಟ ಮಾಡಲು ವಾಪಸ್ ಇಟ್ಟವರಲ್ಲ.

ಆದರೆ ಅವರು ಪತ್ರಿಕೆಯನ್ನು ಮನೆಗೆ ತೆಗೆದುಕೊಂಡು ಹೋಗಿ ಓದುತ್ತಿದ್ದರು. ತಾವು ಓದಿದ ಪತ್ರಿಕೆಗಳು ಗ್ರಾಹಕರಿಗೆ ಮಾರಾಟ ಮಾಡುತ್ತಿರಲಿಲ್ಲ. ತಮಗೆ ಇಷ್ಟವಾದ ಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗುವುದನ್ನು ನಾನು ಇಪ್ಪತ್ತು ವರ್ಷಗಳಿಂದ ಕಂಡಿದ್ದೇನೆ.

ಇದಕ್ಕಿಂತ ವ್ಯವಹಾರಿಕ ಸಿದ್ಧಾಂತ ಹೊಂದಿದ್ದ ವ್ಯಕ್ತಿಯನ್ನು ವಿತರಣಾ ವಲಯದಲ್ಲಿ ನೋಡಲು ಸಾಧ್ಯವೇ ಇಲ್ಲ.
ಆದ್ದನಮನಗಳೇ ಇಡೀ ತಾಲ್ಲೂಕಿನ ಪ್ರತಿ ಗ್ರಾಮಗಳ ಓದುಗರ ಮನೆ ಮತ್ತು ಮನ ತಲುಪಲು ಸಾಧ್ಯವಾಗಿದೆ.
ಇದಕ್ಕಿಂತ ವ್ಯವಹಾರಿಕ ಸಿದ್ಧಾಂತ ಹೊಂದಿದ್ದ ಜೀವವನ್ನು ನಮ್ಮ ಜೀವಮಾನದಲ್ಲಿ ನೋಡಲು ಸಾಧ್ಯವಾಗುವುದಿಲ್ಲ.
ಅವರ ಹಾದಿಯಲ್ಲೇ ಸಾಗುತ್ತಿರುವ ಅವರ ಮಗ ಮತ್ತು ನನ್ನ ಆತ್ಮೀಯ ಸ್ನೇಹಿತರಾದ ಪ್ರಹ್ಲಾದ ತಿಳಗೂಳ ಅವರ ದುಃಖದಲ್ಲಿ ಇಂದು ನನ್ನಂತಹ ಅನೇಕ ಸ್ನೇಹಿತರು ಭಾಗಿಯಾಗಿದ್ದೇವು.

ಶ್ರಮಜೀವಿಯಾದ ಹಾಗೂ ಇತರ ಅನೇಕ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಿರುವ ಪ್ರಹ್ಲಾದ ಅವರಿಗೆ ಏನೂ ಹೇಳಲಾಗುತ್ತಿಲ್ಲ ಆದರೆ ದುಃಖವನ್ನು ತಡೆದುಕೊಂಡು ತಮ್ಮ ಸೇವೆ ಎಂದಿನಂತೆ ಮುಂದುವರೆಸುವಲ್ಲಿ ‘ದಾದಾ’ ಅವರನ್ನು ಕಾಣಬೇಕೆಂದು ಮಾತ್ರ ಹೇಳಬಯಸುತ್ತೇನೆ. ಅಗಲಿದ ಹಿರಿಯ ಜೀವಕ್ಕೆ ನನ್ನ ಭಾವಪೂರ್ಣ ನಮನಗಳು.

ಟಿ. ಶಶಿಧರ, ರಸ್ತಾಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here