ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಕಠಿಣ ಕಾನೂನು ರೂಪಿಸಲು ಎಬಿವಿಪಿ ಆಗ್ರಹ

0
61

ಸುರಪುರ: ಇಂದು ಡ್ರಗ್ಸ್ ದಂಧೆ ಯುವ ಸಮೂಹವನ್ನು ಹಾಳು ಮಾಡುತ್ತಿದೆ.ಈ ದಂಧೆ ರಾಜ್ಯವನ್ನು ಗುರಿಯಾಗಿಸಿಕೊಂಡಿರುವುದು ಬೇಸರದ ಸಂಗತಿಯಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡರು ಬೇಸರ ವ್ಯಕ್ತಪಡಿಸಿದರು.

ನಗರದ ತಹಸೀಲ್ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿ,ಡ್ರಗ್ಸ್‌ಗೆ ಕೇವಲ ಯುವ ಸಮೂಹ ಮಾತ್ರವಲ್ಲದೆ ವಿದ್ಯಾರ್ಥಿಗಳು ಇದರ ಚಟಕ್ಕೆ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ.ಸಿನೆಮಾ ನಟ ನಟಿಯರು ತಮ್ಮ ಆದರ್ಶವೆಂದು ಜನರು ಅವರಂತೆ ಬದುಕಲು ಇಷ್ಟಪಡುತ್ತಿರುವಾಗ,ಅದೇ ಸಿನೆಮಾ ರಂಗದ ಜನರೆ ಇಂದು ಡ್ರಗ್ಸ್ ದಂಧೆಯಲ್ಲಿ ತೊಒಡಗಿದ ಸಂಗತಿಗಳು ಹೊರಬರುತ್ತಿರುವುದು ನೋಡಿದಾಗ ಇದು ಕೇವಲ ಸಿನೆಮಾ ರಂಗ ಮಾತ್ರವಲ್ಲದೆ ಜನ ಸಾಮಾನ್ಯರನ್ನು ತಲುಪಿರುವುದು ಗೊತ್ತಾಗುತ್ತಿದೆ.ಆದ್ದರಿಂದ ಈ ದಂಧೆಗೆ ಕಡಿವಾಣ ಹಾಕಲು ಸರಕಾರ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಆರಂಭಿಸಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಡ್ರಗ್ಸ್ ದಂಧೆಯುಕೂಡ ಭಯೊತ್ಪಾದನೆ ಚಟುವಟಿಕೆಗಿಂತ ಭೀಕರವಾದುದಾಗಿದೆ,ದೇಶವನ್ನು ಹಾಳು ಮಾಡಲು ಬಾಂಬ್ ಹಾಕಬೇಕಿಲ್ಲ ಇಂತಹ ಜಾಲಗಳು ಸಾಕಾಗಿವೆ.ಆದ್ದರಿಂದ ಸರಕಾರ ಕಠಿಣ ಕಾನೂನು ಜಾರಿಗೊಳಿಸಬೇಕೆಂದರು.

ಈ ದಂಧೆಯಲ್ಲಿ ಕೇವಲ ಸಿನೆಮಾ ರಂಗದವರು ಮಾತ್ರವಲ್ಲದೆ ರಾಜಕಾರಣಿಗಳ ಮಕ್ಕಳು ಉದ್ದಿಮೆದಾರರು ಭಾಗಿಯಾಗಿರುವ ಸಾಧ್ಯತೆಯಿದೆ ಆದ್ದರಿಂದ ಈ ದಂಧೆಯ ಕಡಿವಾಣಕ್ಕೆ ಕಠಿಣ ನಿಲುವು ತಾಳುವಂತೆ ಒತ್ತಾಯಿಸಿ ನಂತರ ಗೃಹ ಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೆದಾರ ಅಶೋಕ ಸುರಪುರಕರ್ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಪರಶುರಾಮ ಬೈಲಕುಂಟಿ ಸೋಮಶೇಖರ ದಂಡೋತಿ ಕ್ಯಾತಪ್ಪಾ ಮೇದಾ ಶ್ರೀಕಾಂತ ಮೇದಾರ ಭೀಮಣ್ಣ ಸಗರ ರಮೇಶ ಬೈಚಬಾಳ ಸೇರಿ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here