ಉದ್ಯೋಗ ಖಾತ್ರಿ ಕೆಲಸಕ್ಕಾಗಿ ತಾಲೂಕು ಪಂಚಾಯತಿ ಮುಂದೆ ಧರಣಿ

1
73

ಸುರಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ನಗರದ ತಾಲೂಕು ಪಂಚಾಯತಿ ಮುಂದೆ ಧರಣಿ ನಡೆಸಿ ಉದ್ಯೋಗ ಖಾತ್ರಿ ಕೂಲಿ ಕೆಲಸ ನೀಡುವಂತೆ ಆಗ್ರಹಿಸಿದರು.ಬೆಳಿಗ್ಗೆ ೧೧ ಗಂಟೆಯ ವೇಳೆಗೆ ತಾಲೂಕು ಪಂಚಾಯತಿ ಕಚೇರಿ ಮುಂದೆ ಧರಣಿ ಆರಂಭಿಸಿದ ಅರಕೇರಾ ಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಲಿಕಾರರು ಮೊದಲಿಗೆ ಕಚೇರಿ ಎದುರಿನ ಆವರಣದಲ್ಲಿ ಧರಣಿ ನಡೆಸಿ ನಂತರ ಅಧಿಕಾರಿಗಳು ಬಾರದಿದ್ದಾಗ ಕಚೇರಿಯ ಮುಖ್ಯದ್ವಾರ ಬಂದ್ ಮಾಡಿ ಧರಣಿ ಆರಂಭಿಸಿದರು.

ಈ ಸಂದರ್ಭದಲ್ಲಿ ಹೋರಾಟದ ನೇತೃತ್ವ ವಹಿಸಿದ್ದ ಶರಣು ಹನ್ಸೂರ ಲಕ್ಷ್ಮೀಪುರ ಮಾತನಾಡಿ,ಕಳೆದ ೫ನೇ ತಾರೀಖು ಮನವಿ ಮಾಡಿ ಕಾರ್ಮಿಕರಿಗೆ ಕೆಲಸ ಕೊಡುವಂತೆ ಮನವಿ ಮಾಡಿದ್ದೇವೆ,ಆದರೆ ಇದುವರೆಗೂ ಕೆಲಸ ನೀಡಿಲ್ಲ ಕೂಲಿಕಾರರು ಒಂದೊತ್ತಿನ ಊಟಕ್ಕೂ ಪರದಾಡಬೇಕಾಗಿದೆ.ಆದ್ದರಿಂದ ಅರಕೇರಾ ಕೆ ಗ್ರಾಮ ಪಂಚಾಯತಿ ಅಭೀವೃಧ್ಧಿ ಅಧಿಕಾರಿಯ ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳುವುದರ ಜೊತೆಗೆ ಅವರಿಗೆ ದಂಡ ವಿಧಿಸಿ ಕೂಲಿಕಾರರಿಗೆ ನೀಡಬೇಕೆಂದು ಮತ್ತು ಇದುವರೆಗೆ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ನೀಡಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ಧರಣಿ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ವಿಶ್ವನಾಥ ಆಗಮಿಸಿ ಧರಣಿ ನಿರತರ ಮನವಿ ಆಲಿಸಿ ಎರಡು ದಿನಗಳಲ್ಲಿ ಕೆಲಸ ಕೊಡುವ ಭರವಸೆ ನೀಡಿದ ನಂತರ ಮನವಿ ಸಲ್ಲಿಸಿ ಧರಣಿ ನಿಲ್ಲಿಸಿದರು.ಈ ಸಂದರ್ಭದಲ್ಲಿ ಯೋಜನಾಧಿಕಾರಿ ಬಸ್ಸಯ್ಯ ಸ್ವಾಮಿ ಪಿಡಿಒ ಹಾಗು ಜೆಇ ಇದ್ದರು.

ಧರಣಿಯಲ್ಲಿ ಭಾಗವಹಿಸಿ ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಪ್ರಕಾಶ ಆಲ್ಹಾಳ ಮಾತನಾಡಿದರು.ಕೂಲಿಕಾರರಾದ ಭಿಮಪ್ಪ ಶರಣಮ್ಮ ಸಿದ್ದಮ್ಮ ನಿಂಗಮ್ಮ ಲಕ್ಷ್ಮೀಬಾಯಿ ಕೃಷ್ಣಮ್ಮ ಅನ್ನಪೂರ್ಣ ಮಾಳಪ್ಪ ಯಂಕಮ್ಮ ಸುಮಂಗಲಾ ಸೇರಿದಂತೆ ಅನೇಕರಿದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here