ತಳವಾರ ಪರಿವಾರಕ್ಕೆ ಎಸ್ಟಿ ಪ್ರಮಾಣ ಪತ್ರ ದೊರೆಯದಿರಲು ಸಚಿವ ಗೋವಿಂದ ಕಾರಜೋಳ ಕಾರಣ: ಲಚ್ಚಪ್ಪ ಜಾಮದಾರ

0
505

ಸುರಪುರ: ಕೇಂದ್ರ ಸರಕಾರ ನಮ್ಮ ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡುವಂತೆ ಆದೇಶ ಮಾಡಿದೆ,ಆದರೆ ರಾಜ್ಯದಲ್ಲಿನ ನಮ್ಮ ಸಮುದಾಯಗಳಿಗೆ ಎಸ್ಟಿ ಪ್ರಮಾಣ ಪತ್ರ ದೊರೆಯುವುದನ್ನು ತಡೆಯಲು ಉಪಮುಖ್ಯಮಂತ್ರಿ ಹಾಗು ಸಚಿವ ಗೋವಿಂದ ಕಾರಜೋಳ ಕಾರಣ ಎಂದು ಅಖಿಲ ಕರ್ನಾಟಕ ತಳವಾರ ಮತ್ತು ಪರಿವಾರ ಬುಡಕಟ್ಟು ಹೋರಾಟ ಸಂಘದ ರಾಜ್ಯಾಧ್ಯಕ್ಷ ಲಚ್ಚಪ್ಪ ಜಾಮದಾರ ಮಾತನಾಡಿದರು.

ಸಂಘದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ತಳವಾರ ಪರಿವಾರ ಸಮುದಾಯಗಳು ಎಸ್ಟಿ ಪ್ರಮಾಣ ಪತ್ರ ಪಡೆಯಲು ಅರ್ಹವೆಂದು ಭಾವಿಸಿರುವ ಕೇಂದ್ರ ಸರಕಾರ ಎಸ್ಟಿ ಪ್ರಮಾಣ ಪತ್ರ ನೀಡುವಂತೆ ಆದೇಶ ಮಾಡಿದೆ,ಆದರೆ ಇಲ್ಲಿಯ ರಾಜ್ಯ ಸರಕಾರ ಉದ್ದೇಶಪೂರ್ವಕವಾಗಿ ಪ್ರಮಾಣ ಪತ್ರ ನೀಡುವುದನ್ನು ತಡೆದಿದೆ,ಇದೇ ಧೋರಣೆ ಮುಂದುವರೆದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಹೋರಾಟದಲ್ಲಿ ಭಾಗವಹಿಸಿದ್ದ ಸುನೀತಾ ತಳವಾರ ಮಾತನಾಡಿ, ತಳವಾರ ಮತ್ತು ಪರಿವಾರಕ್ಕೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೆವೆ ಇದನ್ನು ಕೊಡದೆ ಸರಕಾರ ಮೋಸ ಮಾಡುತ್ತಿದೆ,ನಮ್ಮ ಈ ಸಮುದಾಯಗಳಿಗೆ ಎಸ್ಟಿ ಪ್ರಮಾಣ ಪತ್ರ ನೀಡುವುದರಿಂದ ಬೇರಾವ ಸಮುದಾಯಗಳಿಗೂ ತೊಂದರೆಯಾಗದು.

ಯಾಕೆಂದರೆ ಈ ಸರಕಾರ ಯಾವ ಸಂದರ್ಭದಲ್ಲಿ ಯಾವ ಮೀಸಲಾತಿ ತೆಗೆಯುವುದೊ ಗೊತ್ತಿಲ್ಲ,ಆದ್ದರಿಂದ ರಾಜ್ಯದಲ್ಲಿನ ಎಲ್ಲಾ ಎಸ್ಟಿ ಮತ್ತು ಎಸ್ಸಿ ಬಂಧುಗಳು ಈ ಹೊರಾಟಕ್ಕೆ ಬೆಂಬಲ ನೀಡಬೇಕು,ಮುಂದೆ ಮೀಸಲಾತಿ ತೆಗೆಯುವ ಮಾತು ಸರಕಾರದಿಂದ ಬಂದರೆ ನಾವು ನಿಮ್ಮೊಂದಿಗೆ ಹೋರಾಟಕ್ಕೆ ಧುಮುಕಲಿದ್ದೇವೆ ಎಂದರು.ನಮ್ಮ ಹೋರಾಟಕ್ಕೆ ಹೊರಗಿನವರಿಂದ ವಿರೋಧವಿಲ್ಲ ನಾವು ನಂಬಿರುವ ಬೆಂಬಲಿಸಿರುವ ಶಾಸಕರು ಸಂಸದರುಗಳೆ ವಿರೋಧಿಸುತ್ತಿದ್ದಾರೆ.ಇದೇ ಧೋರಣೆ ಮುಂದುವರೆದರೆ ಮುಂದೆ ನಾವು ನಿಮ್ಮಿಂದ ದೂರವಾಗಬೇಕಾಆಗಲಿದೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ವರಲಿಂಗ ಮಹಾಸ್ವಾಮಿ ಯಾಗರಗುಂಡಗಿ ವಿಜಯಪು ಜಿಲ್ಲಾಧ್ಯಕ್ಷ ಶಿವಾಜಿ ಮೆಟಗಾರ ಕುರುಬ ಸಮುದಾಯದ ಮುಖಂಡರಾದ ರಂಗನಗೌಡ ದೇವಿಕೆರಾ ಮಲ್ಲು ದಂಡಿನ್ ಮಾತನಾಡಿದರು. ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ದೌಲಮಲಿಕ ಸಾಹೆಬ್ ಕೊಡೆಕಲ್ ರಾಜ್ಯ ಉಪಾಧ್ಯಕ್ಷ ಪಿಡ್ಡಪ್ಪ ಜಾಲಗಾರ ಮಹಿಳಾ ಉಪಾಧ್ಯಕ್ಷ ವಾಣಿಶ್ರೀ ಸಗರಕರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಬಣ್ಣ ನರಗೋದಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೌನೇಶ ಆರ್.ಬೋವಿ ಶಿವು ಧಣಿ ಕಲಬುರ್ಗಿ ಜಿಲ್ಲಾಧ್ಯಕ್ಷ ನಿಂಗು ಐಕೂರ ಕಪ್ರಕು ಸಂಘ ತಾಲೂಕಧ್ಯಕ್ಷ ರಾಹುಲ್ ಮಂಗಿಹಾಳ ಯುವ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ನಾಗಣ್ಣ ಕಲ್ಲದೇವನಹಳ್ಳಿ ದಸಂಸ ರಾಜ್ಯ ಸಂ ಸಂಚಾಲಕ ಸಚಿನ್ ನಾಶಿ ತಳವಾರ ಪರಿವಾರ ಹೋರಾಟ ಸಮಿತಿ ಶಹಾಪುರ ತಾಲೂಕಾಧ್ಯಕ್ಷ ದೇವಿಂದ್ರಪ್ಪಗೌಡ ಮಾಲಿ ಪಾಟೀಲ್ ಸುರಪುರ ತಾಲೂಕಾಧ್ಯಕ್ಷ ಮಲ್ಲು ವಿಷ್ಣು ಸೇನಾ ನಗರ ಘಟಕಾಧ್ಯಕ್ಷ ಕೃಷ್ಣಾ ಪರಸನಹಳ್ಳಿ ಕೆಂಭಾವಿ ಹೋಬಳಿ ಅಧ್ಯಕ್ಷ ಹೊನಕೆರಪ್ಪ ಬಡಿಗೇರ ಕೇಂಭಾವಿ ಹೋಬಳಿ ಡೇವಿಡ್ ಮುದನೂರ ಸೇರಿದಂತೆ ಐದು ನೂರಕ್ಕು ಹೆಚ್ಚು ಜನ ಭಾಗವಹಿಸಿದ್ದರು.ಪಿಐ ಸಾಹೇಬಗೌಡ ಪಾಟೀಲ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here